Aniversário de criança
O aniversário de uma criança é momento de celebrar o presente precioso que Deus deu. Cada criança é formada e conhecida por Deus desde antes de nascer.
ನನ್ನ ಅಂತರಾತ್ಮವನ್ನು ಉಂಟು ಮಾಡಿದವರು ನೀವೇ;
ನನ್ನ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವರು ನೀವೇ.
ನೀವು ನನ್ನನ್ನು ವಿಚಿತ್ರವಾಗಿಯೂ ವಿಸ್ಮಯವಾಗಿಯೂ ಸೃಷ್ಟಿಸಿದ್ದರಿಂದ
ನಾನು ನಿಮ್ಮನ್ನು ಸ್ತುತಿಸುತ್ತೇನೆ;
ನಿಮ್ಮ ಕೃತ್ಯಗಳು ಆಶ್ಚರ್ಯಕರವಾಗಿವೆ ಎಂದು,
ನಾನು ಪೂರ್ಣವಾಗಿ ತಿಳಿದಿದ್ದೇನೆ.
ನೀವು ನನ್ನನ್ನು ಮರೆಯಲ್ಲಿ ರೂಪಿಸಿದಾಗಲೂ,
ಭೂಗರ್ಭದಲ್ಲಿ ನನ್ನನ್ನು ರಚಿಸಿದಾಗಲೂ
ನನ್ನ ಅಸ್ಥಿಪಂಜರವು ನಿಮಗೆ ಮರೆಯಾಗಿರಲಿಲ್ಲ.
ನಾನು ಇನ್ನೂ ಭ್ರೂಣವಾಗಿರುವಾಗಲೇ ನಿಮ್ಮ ಕಣ್ಣುಗಳು ನನ್ನನ್ನು ನೋಡಿದವು;
ನೀವು ನನಗೆ ಅನುಮತಿಸಿರುವ ಪ್ರಥಮ ದಿನದಿಂದ ಕೊನೆಯದಿನದವರೆಗೆ
ನನ್ನ ಎಲ್ಲಾ ದಿನಗಳೂ ನಿಮ್ಮ ಪುಸ್ತಕದಲ್ಲಿ ಬರೆಯಲಾಗಿವೆ.
ದೇವರೇ, ನಿಮ್ಮ ಆಲೋಚನೆಗಳು ನನಗೆ ಎಷ್ಟೋ ಅಮೂಲ್ಯವಾಗಿವೆ!
ಅವುಗಳ ಎಣಿಕೆ ನನಗೆ ಎಷ್ಟೋ ಅಸಂಖ್ಯವಾಗಿವೆ!
ಯೆಹೋವ ದೇವರು ಮಾಡಿದ ದಿನವು ಇದೇ;
ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡೋಣ.
ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ,
ನಮ್ಮ ದಿನಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸಿಕೊಡಿರಿ.
ಹುಟ್ಟಿನಿಂದ ನೀವೇ ನನ್ನ ಭರವಸೆ.
ತಾಯಿಯ ಗರ್ಭದಿಂದ ನೀವೇ ನನ್ನನ್ನು ಹೊರಗೆ ತಂದಿದ್ದೀರಿ.
ನಾನು ಯಾವಾಗಲೂ ನಿಮ್ಮನ್ನು ಸ್ತುತಿಸುತ್ತಿರುವೆನು.
ಯೆಹೋವ ದೇವರ ಮನೆಯಲ್ಲಿ ನಾನು ಜೀವಮಾನವೆಲ್ಲಾ ವಾಸಮಾಡುತ್ತಾ,
ಅದರ ದಯೆಯನ್ನು ನೋಡುತ್ತಾ
ಅವರ ಮಂದಿರದಲ್ಲಿ ಅವರನ್ನೇ ಧ್ಯಾನಿಸುತ್ತಾ
ಇರಬೇಕೆಂಬ ಒಂದೇ ವರವನ್ನು
ಯೆಹೋವ ದೇವರಿಂದ ಕೇಳಿಕೊಂಡು
ಅದನ್ನೇ ಹುಡುಕುತ್ತಿರುವೆನು.
ತಾಯಿಯ ಗರ್ಭದೊಳಗಿಂದ ನನ್ನನ್ನು ಹೊರತಂದವರು ನೀವು;
ನನ್ನ ತಾಯಿಯ ಎದೆಯಲ್ಲಿ ಇದ್ದಾಗಲೇ ನಾನು ನಿಮ್ಮಲ್ಲಿ ಭರವಸೆಯಿಡುವಂತೆ ಮಾಡಿದಿರಿ.
ಹುಟ್ಟಿದಂದಿನಿಂದಲೇ ನೀವೇ ನನಗೆ ಆಧಾರ
ನನ್ನ ತಾಯಿಯ ಗರ್ಭದಿಂದಲೇ ನೀವು ನನ್ನ ದೇವರು.
ನಾನು ಯೆಹೋವ ದೇವರಿಗೆ ವಿಜ್ಞಾಪನೆ ಮಾಡಿದ್ದನ್ನು ಅವರು ನನಗೆ ಕೊಟ್ಟರು.
ನಾನೂ ಕೂಡ ನನ್ನ ತಂದೆಗೆ ನೆಚ್ಚಿನ ಮಗನೂ
ನನ್ನ ತಾಯಿಗೆ ಮುದ್ದು ಮಗನೂ ಆಗಿದ್ದೆನು.
ನನ್ನ ತಂದೆ ನನಗೆ ಬೋಧಿಸಿ ಹೇಳಿದ್ದೇನೆಂದರೆ,
"ನನ್ನ ಮಾತುಗಳನ್ನು ಮನಃಪೂರ್ವಕವಾಗಿ ಪಾಲಿಸು;
ನನ್ನ ಆಜ್ಞೆಗಳನ್ನು ಕೈಗೊಳ್ಳು, ಆಗ ನೀನು ಬಾಳುವೆ.
ಅಂತಿಮ ಪ್ರಬೋಧನೆಗಳು
ಯಾವಾಗಲೂ ಕರ್ತ ದೇವರಲ್ಲಿ ಆನಂದಿಸಿರಿ, ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.
ಆ ಶಿಶುವು ಬೆಳೆದು ಬಲಗೊಂಡು; ಜ್ಞಾನದಲ್ಲಿ ವೃದ್ಧಿಯಾಯಿತು ಮತ್ತು ದೇವರ ಕೃಪೆಯು ಶಿಶುವಿನ ಮೇಲೆ ಇತ್ತು.