Tristeza
A tristeza faz parte da experiência humana, mas a Bíblia nos assegura que Deus está perto dos que sofrem. Ele enxuga as lágrimas e transforma a dor em esperança.
Deus consola os aflitos
O Senhor está perto dos quebrantados de coração. Mesmo no vale mais escuro, sua presença é refúgio e consolo para a alma que chora.
ನೀತಿವಂತರ ಕೂಗನ್ನು ಯೆಹೋವ ದೇವರು ಕೇಳಿ,
ಅವರನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ಬಿಡಿಸುತ್ತಾರೆ.
ಮುರಿದ ಹೃದಯದವರಿಗೆ ಯೆಹೋವ ದೇವರು ಸಮೀಪವಾಗಿದ್ದಾರೆ;
ಜಜ್ಜಿದ ಆತ್ಮವುಳ್ಳವರನ್ನು ರಕ್ಷಿಸುತ್ತಾರೆ.
ಯೆಹೋವ ದೇವರು ಕುರುಡರ ಕಣ್ಣುಗಳನ್ನು ತೆರೆಯುತ್ತಾರೆ.
ಅವರು ದೀನರನ್ನು ಎತ್ತುತ್ತಾರೆ.
ನೀತಿವಂತರನ್ನು ಪ್ರೀತಿಸುತ್ತಾರೆ.
ಯೆಹೋವ ದೇವರೇ, ನಿಮಗೆ ನನ್ನ ಅಪೇಕ್ಷೆಗಳೆಲ್ಲಾ ಗೊತ್ತೇ ಇದೆ;
ನನ್ನ ನಿಟ್ಟುಸಿರು ನಿಮಗೆ ಮರೆಯಾದದ್ದಲ್ಲ.
ದುಃಖಿಸುವವರು ಧನ್ಯರು,
ಅವರು ಆದರಣೆ ಹೊಂದುವರು.
ದೇವರು ಅವನಿಗೆ, "ನೀನು ಹಿಂದಿರುಗಿ ಹೋಗಿ ನನ್ನ ಜನರ ನಾಯಕನಾದ ಹಿಜ್ಕೀಯನಿಗೆ, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ. ಮೂರನೆಯ ದಿವಸದಲ್ಲಿ ಯೆಹೋವ ದೇವರ ಆಲಯಕ್ಕೆ ಹೋಗುವೆ.
A alegria virá
A dor tem prazo de validade. A manhã de alegria sempre vem depois da noite de choro. Deus promete transformar o luto em dança.
ಅವರ ಕೋಪವು ಕ್ಷಣಮಾತ್ರವೇ;
ಆದರೆ ಅವರ ದಯೆಯು ಜೀವಮಾನವೆಲ್ಲಾ ಇರುತ್ತದೆ;
ರಾತ್ರಿಯಲ್ಲಿ ದುಃಖ ಬಂದಿದ್ದರೂ;
ಬೆಳಿಗ್ಗೆ ಆನಂದವು ಬರುವುದು.
ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾಧ್ವನಿಯು ನನಗೆ ಕೇಳಿಸಿತು. ಅದು, "ಇಗೋ ದೇವರ ನಿವಾಸವು ಮಾನವರೊಂದಿಗೆ ಇದೆ. ದೇವರು ಅವರೊಡನೆ ವಾಸಮಾಡುವರು. ಮಾನವರು ದೇವರಿಗೆ ಪ್ರಜೆಯಾಗಿರುವರು. ದೇವರು ತಾವೇ ಅವರ ಸಂಗಡ ಇರುವರು. ‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’ ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!" ಎಂದು ಹೇಳಿತು.
‘ಇವರಿಗೆ ಇನ್ನೆಂದಿಗೂ ಹಸಿವೆಯಾಗಲಿ;
ಬಾಯಾರಿಕೆಯಾಗಲಿ ಆಗುವುದಿಲ್ಲ.
ಇದಲ್ಲದೆ ಸೂರ್ಯನ ಬಿಸಿಲಾದರೂ,’
ಯಾವ ಝಳವಾದರೂ ಇವರಿಗೆ ತಟ್ಟುವುದಿಲ್ಲ.
ಏಕೆಂದರೆ, ಸಿಂಹಾಸನದ ಮಧ್ಯದಲ್ಲಿರುವ
ಕುರಿಮರಿ ಆಗಿರುವವರು ಇವರನ್ನು ಮೇಯಿಸಿ;
‘ಜೀವಜಲದ ಒರತೆಗಳ ಬಳಿ ನಡೆಸುವರು.’
‘ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವರು,’"
ಎಂದು ಹೇಳಿದನು.
ದುಃಖ ಪಡುವವರಾಗಿದ್ದರೂ ಹರ್ಷಿಸುತ್ತಿದ್ದೆವು, ಬಡವರಾಗಿದ್ದಾಗಲೂ ಅನೇಕರನ್ನು ಐಶ್ವರ್ಯವಂತರನ್ನಾಗಿ ಮಾಡಿದೆವು, ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಾಗಿದ್ದೇವೆ.
Entregando a dor a Deus
Podemos lançar sobre o Senhor toda nossa ansiedade e tristeza, porque Ele cuida de nós com ternura e não nos abandona.
ನಿಮ್ಮ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿರಿ. ಅವರು ನಿಮಗೋಸ್ಕರ ಚಿಂತಿಸುತ್ತಾರೆ.
ಯೆಹೋವ ದೇವರು ತಾವೇ ನಿನ್ನ ಮುಂದೆ ಹೋಗುತ್ತಾರೆ. ಅವರು ನಿನ್ನ ಸಂಗಡ ಇರುವರು, ಅವರು ನಿನ್ನನ್ನು ತೊರೆಯುವುದಿಲ್ಲ, ಮರೆತುಬಿಡುವುದಿಲ್ಲ. ನೀನು ಭಯಪಡಬೇಡ, ಅಂಜಿಕೊಳ್ಳಬೇಡ," ಎಂದು ಹೇಳಿದನು.
ಸಂತೋಷ ಪಡುವವರೊಂದಿಗೆ ಸಂತೋಷಪಡಿರಿ, ಅಳುವವರೊಂದಿಗೆ ಅಳಿರಿ.
O choro e o arrependimento
Há tristezas que produzem arrependimento e conduzem à vida. O choro diante de Deus é acolhido e transformado em bênção.
ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, "ಈಗಲಾದರೂ
ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ
ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ."
ದ್ರಾಕ್ಷಾಲತೆ ಒಣಗಿದೆ;
ಅಂಜೂರದ ಗಿಡ ಬಾಡಿ ಹೋಗಿದೆ;
ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ.
ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.
ಆಗ ಯೋಬನು ಎದ್ದು ತನ್ನ ಮೇಲಂಗಿಯನ್ನು ಹರಿದುಕೊಂಡನು. ನಂತರ ತನ್ನ ತಲೆ ಬೋಳಿಸಿಕೊಂಡು, ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿ,
ಹೀಗೆ ಹೇಳಿದನು: "ಬೆತ್ತಲೆಯಾಗಿ ನನ್ನ ತಾಯಿಯ ಗರ್ಭದಿಂದ ಬಂದೆನು,
ಬೆತ್ತಲೆಯಾಗಿ ಗತಿಸಿ ಹೋಗುವೆನು.
ಯೆಹೋವ ದೇವರು ಕೊಟ್ಟರು, ಯೆಹೋವ ದೇವರು ತೆಗೆದುಕೊಂಡರು;
ಯೆಹೋವ ದೇವರ ನಾಮಕ್ಕೆ ಸ್ತೋತ್ರವಾಗಲಿ."
ಸೊಲೊಮೋನನ ಜ್ಞಾನೋಕ್ತಿಗಳು:
ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನು ಉಂಟುಮಾಡುತ್ತಾನೆ.
ಅಜ್ಞಾನಿಯಾದ ಮಗನಾದರೋ ತನ್ನ ತಾಯಿಗೆ ಶೋಕವನ್ನುಂಟು ಮಾಡುತ್ತಾನೆ.
ಏಕೆಂದರೆ ಬಹು ಜ್ಞಾನವಿದ್ದಲ್ಲಿ ಬಹು ಸಂಕಟ,
ಹೆಚ್ಚು ತಿಳುವಳಿಕೆ ಇದ್ದಲ್ಲಿ ಹೆಚ್ಚು ವ್ಯಥೆ ಇದೆ.
ಆದ್ದರಿಂದ ನಿನ್ನ ಹೃದಯದಿಂದ ಚಿಂತೆಯನ್ನು ತೆಗೆದುಹಾಕು.
ನಿನ್ನ ಶರೀರದಿಂದ ಕೆಟ್ಟದ್ದನ್ನು ದೂರಮಾಡು.
ಯೌವನವೂ ಅದರ ಚೈತನ್ಯವೂ ಅಲ್ಪಕಾಲವೇ.
ದೇವರ ಪವಿತ್ರಾತ್ಮರನ್ನು ದುಃಖ ಪಡಿಸಬೇಡಿರಿ. ಆ ಆತ್ಮನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.