12 ಹೇಗೆ ದೇಹವು 12:12 1 ಕೊರಿ 10:17ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವೂ ಅನೇಕವಾಗಿದ್ದು ಒಂದೇ ದೇಹವಾಗಿದೆಯೋ, 12:12 1 ಕೊರಿ 12:27.ಹಾಗೆಯೇ ಕ್ರಿಸ್ತನು ಇದ್ದಾನೆ. 13 12:13 ಗಲಾ. 3:28; ಕೊಲೊ 3:11; ಎಫೆ 2:13-17.ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು. 12:13 ಯೋಹಾ 7:37-39ಒಂದೇ ಆತ್ಮವು ನಮ್ಮೆಲ್ಲರಿಗೆ ಪಾನವಾಗಿ ಕೊಡಲ್ಪಟ್ಟಿತು. 14 ದೇಹವು ಒಂದೇ ಅಂಗವಲ್ಲ. ಅನೇಕ ಅಂಗಗಳುಳ್ಳದ್ದಾಗಿದೆ. 15 ಕಾಲು "ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿಲ್ಲವೆಂದು" ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ? 16 ಕಿವಿ "ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲವೆಂದು" ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ? 17 ದೇಹವೆಲ್ಲಾ ಕಣ್ಣಾದರೆ ನೀವು ಏನೂ ಕೇಳಲಾಗುತ್ತಿರಲಿಲ್ಲ. ದೇಹವೆಲ್ಲಾ ಕಿವಿಯಾದರೆ ನೀವು ಯಾವ ವಾಸನೆಯನ್ನು ಮೂಸಲಾಗುತ್ತಿರಲಿಲ್ಲ. 18 ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು 12:18 1 ಕೊರಿ 12:11ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ. 19 ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವುದು? 20 ಆದರೆ ಅಂಗಗಳು ಅನೇಕವಾಗಿದೆ ಆದರೆ ದೇಹವು ಒಂದೇ. 21 ಕಣ್ಣು ಕೈಗೆ, "ನೀನು ನನಗೆ ಅವಶ್ಯವಿಲ್ಲವೆಂದೂ," ತಲೆಯು "ಪಾದಗಳಿಗೆ ನೀವು ನನಗೆ ಅವಶ್ಯವಿಲ್ಲವೆಂದೂ" ಹೇಳುವುದಕ್ಕಾಗುವುದಿಲ್ಲ. 22 ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ? 23 ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವುದುಂಟಲ್ಲಾ. ಹೀಗೆ ಮಾನವಿಲ್ಲದ ಅಂಗಗಳಿಗೆ ಹೆಚ್ಚಾದ ಮಾನವುಂಟಾಗುತ್ತದೆ. 24,25 ಮಾನವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ 12:24-25 1 ಕೊರಿ 1:10, 11:18ಭೇದವೇನೂ ಇರದೇ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಜೋಡಿಸಿದ್ದಾನೆ. 26 ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ 12:26 ರೋಮಾ. 12:15ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.
27 12:27 ಎಫೆ 1:23; 4:12, ಕೊಲೊ 1:24 ನೀವು ಕ್ರಿಸ್ತನ ದೇಹವು ಮತ್ತು 12:27 ರೋಮಾ. 12:5ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ.