ಹನ್ನಳ ಸ್ತುತಿ ಗೀತೆ
1 ಹನ್ನಳು ದೇವರ ಬಳಿ ಹೀಗೆ ವಿಜ್ಞಾಪಿಸಿದಳು,
"2:1 ಲೂಕ 1: 46-53ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ;
2:1 ನನ್ನ ಬಲ. ನನ್ನ ಕೊಂಬು ಯೆಹೋವನಿಂದ ಎತ್ತಲ್ಪಟ್ಟಿದೆ. ಶತ್ರುಗಳ ಮುಂದೆ ನನ್ನ ಬಾಯಿ ಧೈರ್ಯವಾಗಿ ಮಾತನಾಡುತ್ತದೆ,
ಯಾಕೆಂದರೆ ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
2 "ಯೆಹೋವನಂಥ ಪರಿಶುದ್ಧನು ಇಲ್ಲವೇ ಇಲ್ಲ;
ನಿನ್ನ ಹೊರತು ದೇವರು ಯಾರೂ ಇಲ್ಲ
ನಮ್ಮ ದೇವರಂತಹ ಸಮಾನವಾದ ಆಶ್ರಯವಿಲ್ಲ.