ಹನ್ನಳ ಪ್ರಾರ್ಥನೆ
1 ಹನ್ನಳು ಪ್ರಾರ್ಥಿಸಿ ಹೇಳಿದ್ದೇನೆಂದರೆ,
"ನನ್ನ ಹೃದಯವು ಯೆಹೋವ ದೇವರಲ್ಲಿ ಸಂತೋಷಿಸಿತು.
ನನ್ನ ಕೊಂಬು2:1 ಕೊಂಬು ಎಂಬ ಪದವು ಬಲದ ಸಂಕೇತವನ್ನು ಸೂಚಿಸುತ್ತದೆ ಯೆಹೋವ ದೇವರಲ್ಲಿ ಉನ್ನತವಾಯಿತು.
ನನ್ನ ಶತ್ರುಗಳ ಮುಂದೆ ನನ್ನ ಬಾಯಿ ಹೆಚ್ಚಳಪಟ್ಟಿತು.
ಏಕೆಂದರೆ ನಾನು ನಿಮ್ಮ ರಕ್ಷಣೆಯಲ್ಲಿ ಹರ್ಷಿಸುತ್ತೇನೆ.
2 "ಯೆಹೋವ ದೇವರ ಹಾಗೆ ಪರಿಶುದ್ಧರಾದವರಿಲ್ಲ.
ನಿಶ್ಚಯವಾಗಿ ನಿಮ್ಮ ಹೊರತು ಮತ್ತೊಬ್ಬರಿಲ್ಲ.
ನಮ್ಮ ದೇವರ ಹಾಗೆಯೇ ಆಶ್ರಯದುರ್ಗ ಇಲ್ಲ.