7 ಆದುದರಿಂದ ಅವನು ತನ್ನ ಸೇವಕರಿಗೆ, "ಸತ್ತವರಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ. ನಾನು ಆಕೆಯ ಹತ್ತಿರ ಹೋಗಿ ವಿಚಾರಿಸುವೆನು" ಎಂದು ಹೇಳಿದನು. ಆಗ ಅವರು, "ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ" ಅಂದರು. 15 ಆಗ ಸಮುವೇಲನು ಸೌಲನನ್ನು, "ನೀನು ನನ್ನ ವಿಶ್ರಾಂತಿಯನ್ನು ಕೇಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಯಾಕೆ ಬರಮಾಡಿದೆ?" ಎಂದು ಕೇಳಿದನು. ಅದಕ್ಕೆ ಸೌಲನು, "ನಾನು ಬಲು ಇಕ್ಕಟ್ಟಿನಲ್ಲಿದ್ದೇನೆ. ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ. ದೇವರು ನನ್ನನ್ನು ಬಿಟ್ಟು ದೂರ ಹೋಗಿದ್ದಾನೆ. ಆತನು ನನಗೆ ಪ್ರವಾದಿಗಳಿಂದಾಗಲಿ, ಕನಸುಗಳಿಂದಾಗಲಿ ಉತ್ತರಕೊಡಲೊಲ್ಲನು. ಆದುದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವಿಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು" ಅಂದನು.
Publicidade
1 ಸಮುವೇಲನು 28:7,15
IRVKAN Indian Revised Version (IRV) - Kannada - 2019
Em outras traduções
- OKCV Kannada Contemporary Version
7 ಆಗ ಸೌಲನು ತನ್ನ ದಾಸರಿಗೆ, "ನಾನು ವಿಚಾರಿಸುವಂತೆ ಮಾಂತ್ರಿಕಳಾದ ಒಬ್ಬ ಸ್ತ್ರೀಯನ್ನು ವಿಚಾರಿಸಿರಿ," ಎಂದನು.
ಅವನ ದಾಸರು ಅವನಿಗೆ, "ಇಗೋ, ಎಂದೋರಿನಲ್ಲಿ ಮಾಂತ್ರಿಕಳಾದ ಒಬ್ಬ ಸ್ತ್ರೀ ಇದ್ದಾಳೆ," ಎಂದರು.
15 ಆಗ ಸಮುಯೇಲನು ಸೌಲನಿಗೆ, "ನೀನು ನನ್ನನ್ನು ಇಲ್ಲಿ ಬರಮಾಡಿ ವಿಶ್ರಾಂತಿ ಕೆಡಿಸಿದೆ," ಎಂದನು.
ಅದಕ್ಕೆ ಸೌಲನು, "ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ. ಏಕೆಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಮಾಡುತ್ತಾರೆ. ಆದರೆ ದೇವರು ನನ್ನನ್ನು ಬಿಟ್ಟುಹೋದರು. ಅವರು ಪ್ರವಾದಿಗಳ ಮುಖಾಂತರವಾದರೂ, ಸ್ವಪ್ನದ ಮುಖಾಂತರವಾದರೂ ನನಗೆ ಉತ್ತರ ಕೊಡಲಿಲ್ಲ. ಆದ್ದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು," ಎಂದನು.
Direitos das traduções citadas
Estes versículos te tocaram? Ore agora!
+581 estão orando agora.
Junte-se à corrente de oração.