7 ಆಗ ಸೌಲನು ತನ್ನ ದಾಸರಿಗೆ, "ನಾನು ವಿಚಾರಿಸುವಂತೆ ಮಾಂತ್ರಿಕಳಾದ ಒಬ್ಬ ಸ್ತ್ರೀಯನ್ನು ವಿಚಾರಿಸಿರಿ," ಎಂದನು.
ಅವನ ದಾಸರು ಅವನಿಗೆ, "ಇಗೋ, ಎಂದೋರಿನಲ್ಲಿ ಮಾಂತ್ರಿಕಳಾದ ಒಬ್ಬ ಸ್ತ್ರೀ ಇದ್ದಾಳೆ," ಎಂದರು.
15 ಆಗ ಸಮುಯೇಲನು ಸೌಲನಿಗೆ, "ನೀನು ನನ್ನನ್ನು ಇಲ್ಲಿ ಬರಮಾಡಿ ವಿಶ್ರಾಂತಿ ಕೆಡಿಸಿದೆ," ಎಂದನು.
ಅದಕ್ಕೆ ಸೌಲನು, "ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ. ಏಕೆಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಮಾಡುತ್ತಾರೆ. ಆದರೆ ದೇವರು ನನ್ನನ್ನು ಬಿಟ್ಟುಹೋದರು. ಅವರು ಪ್ರವಾದಿಗಳ ಮುಖಾಂತರವಾದರೂ, ಸ್ವಪ್ನದ ಮುಖಾಂತರವಾದರೂ ನನಗೆ ಉತ್ತರ ಕೊಡಲಿಲ್ಲ. ಆದ್ದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು," ಎಂದನು.