ಕ್ರಿಸ್ತನ ಉತ್ಕೃಷ್ಟತೆ
15 ಕ್ರಿಸ್ತನು 1:15 1 ತಿಮೊ 1:17ಅದೃಶ್ಯನಾದ ದೇವರ 1:15 2 ಕೊರಿ 4:4ಪ್ರತಿರೂಪನೂ, ಸೃಷ್ಟಿಗೆಲ್ಲಾ 1:15 ಕೀರ್ತ 89:27; ಜ್ಞಾ. 8:24-31; ರೋಮಾ. 8:29 ಸೃಷ್ಟಿಗೆಲ್ಲಾ ಶ್ರೇಷ್ಠನೂ ಆಗಿದ್ದಾನೆ. ಜೇಷ್ಠಪುತ್ರನೂ ಆಗಿದ್ದಾನೆ. 16 ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, 1:16 ಎಫೆ 1:21ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. 1:16 ಯೋಹಾ 1:3; ರೋಮಾ. 11:36; 1 ಕೊರಿ 8:6ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು. 17 1:17 ಯೋಹಾ 1:1; 8:58ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ. 18 1:18 ಎಫೆ 1:2-23ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ, 1:18 ಪ್ರಕ 3:14ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ 1:18 ಅ. ಕೃ. 26:23; 1 ಕೊರಿ 15:20; ಪ್ರಕ 1:5ಮೊದಲು ಎದ್ದು ಬಂದವನು ಆತನೇ. 19 ಏಕೆಂದರೆ 1:19 ಕೊಲೊ 2:9; ಯೋಹಾ 1:16; ಎಫೆ 1:23ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ, 20 ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ 1:20 ಎಫೆ 2:14ತಾನು ಸಮಾಧಾನವನ್ನುಂಟುಮಾಡಿ, 1:20 2 ಕೊರಿ 5:18; ಎಫೆ 1:10ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.