Pular para o conteúdo
Publicidade

ಕೊಲೊಸ್ಸೆಯವರಿಗೆ 1:15-20

OKCV Kannada Contemporary Version

ಕ್ರಿಸ್ತ ಯೇಸುವಿನ ಸರ್ವಶ್ರೇಷ್ಠತೆ

15 ಕ್ರಿಸ್ತ ಯೇಸು ಅದೃಶ್ಯರಾದ ದೇವರ ಸ್ವರೂಪವೂ ಸರ್ವಸೃಷ್ಟಿಗು ಜ್ಯೇಷ್ಠ ಪುತ್ರರೂ ಆಗಿದ್ದಾರೆ. 16 ಏಕೆಂದರೆ ಭೂಪರಲೋಕಗಳಲ್ಲಿರುವ ಕಾಣುವಂತವುಗಳಾಗಲಿ, ಕಾಣದಂತವುಗಳಾಗಲಿ ಸಮಸ್ತವು ಇವರ ಮೂಲಕವೇ ಸೃಷ್ಟಿಸಲಾಯಿತು. ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಕ್ರಿಸ್ತನಲ್ಲಿಯೇ ಸೃಷ್ಟಿಗೊಂಡವು. ಸರ್ವವೂ ಕ್ರಿಸ್ತರಿಂದಲೂ ಕ್ರಿಸ್ತರಿಗಾಗಿಯೂ ಸೃಷ್ಟಿಹೊಂದಿತು. 17 ಕ್ರಿಸ್ತ ಯೇಸು ಎಲ್ಲದಕ್ಕೂ ಮೊದಲು ಇದ್ದವರು, ಇವರಲ್ಲಿಯೇ ಸಮಸ್ತವೂ ನೆಲೆಯಾಗಿದೆ. 18 ಕ್ರಿಸ್ತ ಯೇಸು ಸಭೆಯೆಂಬ ದೇಹಕ್ಕೆ ಶಿರಸ್ಸಾಗಿದ್ದಾರೆ. ಎಲ್ಲದರಲ್ಲಿಯೂ ಇವರೇ ಪ್ರಥಮ ಸ್ಥಾನಹೊಂದಿರುವಂತೆ, ಆರಂಭವೂ ಸತ್ತು ಎದ್ದು ಬಂದವರಲ್ಲಿ ಪ್ರಥಮವಾದವರು ಆಗಿದ್ದಾರೆ. ಹೀಗೆ ಇವರು ಎಲ್ಲದರಲ್ಲಿಯೂ ಸರ್ವಶ್ರೇಷ್ಠರಾಗಿದ್ದಾರೆ. 19 ಏಕೆಂದರೆ ದೇವರು ಕ್ರಿಸ್ತ ಯೇಸುವಿನಲ್ಲಿ ಸರ್ವಸಂಪೂರ್ಣತೆಯು ವಾಸವಾಗಿರಲು ಬಯಸಿದರು. 20 ಕ್ರಿಸ್ತ ಯೇಸು ಶಿಲುಬೆಯ ಮೇಲೆ ಸುರಿಸಿದ ರಕ್ತದ ಮೂಲಕವಾಗಿ, ದೇವರು ಸಮಾಧಾನವನ್ನು ಉಂಟುಮಾಡಿ, ಕ್ರಿಸ್ತನ ಮೂಲಕವೇ ಭೂಪರಲೋಕಗಳಲ್ಲಿರುವ ಎಲ್ಲವನ್ನೂ ತಮ್ಮೊಂದಿಗೆ ಸಂಧಾನಪಡಿಸಿಕೊಂಡರು.

Em outras traduções

  1. SII25 Bíblia Siddi

    15 ಕ್ರಿಸ್ತ್ ಕೊನಾಕ್ಬಿ ದಿಸಿನಸಲ್ಲ್ಯಾ ದೆವಾಚೊ ಪ್ರತಿರುಪ್ ಹೊವ್ನ್ ಹಾಯ್, ರಚುನ್ ಹೊಲ್ಲ್ಯಾ ಸಗ್ಳ್ಯಾಕ್ ಜೆಜು ಮುಳ್ ಹೊವ್ನ್ ಹಾಯ್. 16 ಜಿಮ್ನಿರ್ ಅನಿ ಸರ್‍ಗಾತ್ ಹೊತ್ತೆ ಸಗ್ಳೆ ದಿಸ್ತಲೆ ಅನಿ ದಿಸಿ ನಸಲೆ, ಆತ್ಮಿಕ್ ಬಳಾ, ಪದ್ವಿಯಾ ಸಗ್ಳಿ ತೆಚ್ಯಾ ಬಳಾನ್ ರಚುನ್ ಹೊಲ್ಯಾತ್, ಸಗ್ಳೆಬಿ ತೆಚ್ಯಾ ವೈನಾ ತೆಚ್ಯಾಸಾಟ್ನಿ ರಚುನ್ ಹೊಲಾ.

    17 ತೆಚ್ಯಾ ಸಗ್ಳ್ಯಾನ್ ಅದ್ದಿಚ್ ಕ್ರಿಸ್ತ್ ಹೊತ್ತೊ ಸಗ್ಳ್ಯಾಕ್ನಿ ತೊಚ್ ಆಧಾರ್ ಹೊವ್ನ್ ಹಾಯ್. 18 ಕ್ರಿಸ್ತ್ ತಾಂಡೊ ಮನ್ತಲ್ಯಾ ಆಂಗಾಕ್ ಟಕ್ಲೆ ಹೊವ್ನ್ ಹಾಯ್, ಹರಿ ಎಕ್ಬಿ ತೆಚ್ಯಾಕ್ನಾಚ್ ಯೆತಾ, ಮರ್ನಾತ್ನಾ ಅದ್ದಿ ಉಟುನ್ ಯೆಲ್ಲೊ ತೊಚ್, ತಸೆ ಹೊವ್ನ್ ಸಗ್ಳ್ಯಾಕ್ನಿ ತೊಚ್ ಅದ್ದಿಚೊ ಹೊವ್ನ್ ಹಾಯ್. 19 ಕಶ್ಯಾಕ್ ಮಟ್ಲ್ಯಾರ್ ತೆಚ್ಯಾಕ್ಡೆ ಅಪ್ಲೆ ಸಗ್ಳೆ ಸಂಪುರ್ನ್ ಪಾನ್ ರ್‍ಹಾವ್ಚೆ ಮನುನ್, 20 ಅನಿ ತೆನಿ ಕುರ್ಸಾರ್ ವೊತಲ್ಲ್ಯಾ ರಗ್ತಾ ವೈನಾ ಸಮಾದಾನ್ ಹಾನುನ್ ಸರ್‍ಗಾರ್ ಅನಿ ಜಮ್ನಿ ವರ್‍ತಿ ಹೊತ್ತೆ ಹರ್ ಎಕ್ಬಿ ತೆಚ್ಯಾ ವೈನಾ ರಾಜಿ ಕರುನ್ ಘೆವ್ಚೆ ಮನ್ತಲಿ ದೆವಾಚಿ ಇಚ್ಚಾ ಹೊತ್ತಿ.

  2. IRVKAN Indian Revised Version (IRV) - Kannada - 2019

    15 ಕ್ರಿಸ್ತನು 1:15 1 ತಿಮೊ 1:17ಅದೃಶ್ಯನಾದ ದೇವರ 1:15 2 ಕೊರಿ 4:4ಪ್ರತಿರೂಪನೂ, ಸೃಷ್ಟಿಗೆಲ್ಲಾ 1:15 ಕೀರ್ತ 89:27; ಜ್ಞಾ. 8:24-31; ರೋಮಾ. 8:29 ಸೃಷ್ಟಿಗೆಲ್ಲಾ ಶ್ರೇಷ್ಠನೂ ಆಗಿದ್ದಾನೆ. ಜೇಷ್ಠಪುತ್ರನೂ ಆಗಿದ್ದಾನೆ. 16 ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, 1:16 ಎಫೆ 1:21ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. 1:16 ಯೋಹಾ 1:3; ರೋಮಾ. 11:36; 1 ಕೊರಿ 8:6ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು. 17 1:17 ಯೋಹಾ 1:1; 8:58ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ. 18 1:18 ಎಫೆ 1:2-23ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ, 1:18 ಪ್ರಕ 3:14ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ 1:18 ಅ. ಕೃ. 26:23; 1 ಕೊರಿ 15:20; ಪ್ರಕ 1:5ಮೊದಲು ಎದ್ದು ಬಂದವನು ಆತನೇ. 19 ಏಕೆಂದರೆ 1:19 ಕೊಲೊ 2:9; ಯೋಹಾ 1:16; ಎಫೆ 1:23ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ, 20 ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ 1:20 ಎಫೆ 2:14ತಾನು ಸಮಾಧಾನವನ್ನುಂಟುಮಾಡಿ, 1:20 2 ಕೊರಿ 5:18; ಎಫೆ 1:10ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.

Colossenses
Ver todos os capítulos de Colossenses