1 ಕಷ್ಟದ ದಿನಗಳು ಬರುವುದಕ್ಕೆ ಮೊದಲು,
"ಇವುಗಳಲ್ಲಿ ನನಗೆ ಸಂತೋಷವಿಲ್ಲ" ಎಂದು,
ನೀನು ಹೇಳುವ ವರ್ಷಗಳು ಸಮೀಪಿಸುವುದರೊಳಗಾಗಿ,
ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.
2 ಸೂರ್ಯನೂ, ಚಂದ್ರನೂ ಮತ್ತು ನಕ್ಷತ್ರಗಳೂ ಕತ್ತಲಾಗುವ ಮೊದಲೇ,
ಮಳೆಯ ಮೋಡಗಳು ಹಿಂತಿರುಗಿ ಬರುವವು.
3 12:3 ಇಲ್ಲಿ ಮನೆ ಮಾನವ ಶಾರೀರಿಕ ದೇಹವೆಂಬ, ಗಾವಲಿನವರು ಕೈಗಳೆಂಬ, ಬಲಿಷ್ಠರು ಕಾಲುಗಳೆಂಬ, ಅರೆಯುವವರು ಹಲ್ಲುಗಳೆಂಬ, ಮತ್ತು ನೋಡುವವರು ಕಣ್ಣುಗಳೆಂಬ ಅರ್ಥವನ್ನು ನೀಡುತ್ತದೆ. ಈ ಉದಾಹರಣೆಗಳು ಮರಣದ ಅರ್ಥವನ್ನು ಸಹ ತೋರಿಸುತ್ತವೆ ಎಂದು ಕೆಲವು ಪಂಡಿತರು ಹೇಳುತ್ತಾರೆ. ಅದೇ ಕಾಲದಲ್ಲಿ ಮನೆಗಾವಲಿನವರು ನಡುಗುವರು,
ಬಲಿಷ್ಠರು ಬಗ್ಗುವರು,
ಅರೆಯುವವರು ಕಡಿಮೆ ಜನರಿರುವುದರಿಂದ ಕೆಲಸವನ್ನು ನಿಲ್ಲಿಸಿಬಿಡುವರು,
ಕಿಟಕಿಗಳಿಂದ ನೋಡುವವರು ಮಂಕಾಗುವರು.