Pular para o conteúdo
Publicidade

ಎಜ್ರನು 1

ಅರಸನಾದ ಕೋರೆಷನು ಯೆಹೂದ್ಯರಿಗೆ ಸ್ವದೇಶಕ್ಕೆ ಹಿಂತಿರುಗಲು ಅಪ್ಪಣೆಕೊಟ್ಟದ್ದು

1 ಪರ್ಷಿಯ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಆ ಪರ್ಷಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರೇಪಿಸಿದನು. 2 ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ, ಪತ್ರಗಳಿಂದಲೂ, "ಪರ್ಷಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ. ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು, ತನಗೋಸ್ಕರ ಯೆಹೂದ ದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ. 3 ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ, ಅವರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ. ಅವರ ದೇವರು ಅವರ ಸಂಗಡ ಇರಲಿ. 4 ಸೆರೆಯವರಲ್ಲಿ ಉಳಿದವರು ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರುಗಳವರು ಯೆರೂಸಲೇಮಿನ ದೇವಾಲಯಕ್ಕೋಸ್ಕರ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕು, ಪಶು ಇವುಗಳನ್ನೂ ಕೊಟ್ಟು ಅವರಿಗೆ ಸಹಾಯ ಮಾಡಲಿ" ಎಂದು ಪ್ರಕಟಿಸಿದನು.

5 ಆಗ ಯೆಹೂದ ಮತ್ತು ಬೆನ್ಯಾಮೀನ್ ಗೋತ್ರ ಪ್ರಧಾನರಲ್ಲಿಯೂ, ಯಾಜಕರಲ್ಲಿಯೂ ಮತ್ತು ಲೇವಿಯರಲ್ಲಿಯೂ ದೇವಪ್ರೇರಣೆಗೆ ಒಳಗಾದವರೆಲ್ಲರೂ ಯೆರೂಸಲೇಮಿನಲ್ಲಿ ಯೆಹೋವನಿಗೋಸ್ಕರ ಆಲಯವನ್ನು ಕಟ್ಟುವುದಕ್ಕಾಗಿ ಹೊರಟುಹೋದರು. 6 ಅವರ ನೆರೆಯವರೆಲ್ಲರೂ ಕಾಣಿಕೆಗಳನ್ನು ಕೊಟ್ಟಿದ್ದಲ್ಲದೆ ಅವರಿಗೆ ಬೆಳ್ಳಿಯ ಸಾಮಾನು, ಬಂಗಾರ, ಸರಕು, ಪಶು, ಶ್ರೇಷ್ಠವಸ್ತು ಇವುಗಳನ್ನೂ ಕೊಟ್ಟು ಸಹಾಯಮಾಡಿದರು. 7 ಅಲ್ಲಿಂದ ನೆಬೂಕದ್ನೆಚ್ಚರನು1:7 ನೆಬೂಕದ್ನೆಚ್ಚರನು ನೆಬೂಕದ್ನೆಚ್ಚರನು ಕ್ರಿ.ಪೂ. 605-562 ರಲ್ಲಿ ಆಳಿದ ಬಾಬಿಲೋನಿಯನ್ ಅರಸನಾಗಿದ್ದನು. ಕ್ರಿ.ಪೂ. 597 ರಲ್ಲಿ ಯೆರೂಸಲೇಮಿಗೆ ಮುತ್ತಿಗೆ ಹಾಕಿದವನು, ಕ್ರಿ.ಪೂ. 586 ರಲ್ಲಿ ದೇವಾಲಯವನ್ನು ಹಾಳುಮಾಡಿದವನು, ಕ್ರಿ.ಪೂ. 597, 586 ಮತ್ತು 582 ರಲ್ಲಿ ಅನೇಕ ಜನರನ್ನು ಯೆಹೂದದಿಂದ ಸೆರೆವಾಸಿಗಳಾಗಿ ತೆಗೆದುಕೊಂಡು ಹೋದವನು, ಮತ್ತು ಕ್ರಿ.ಪೂ. 597 ಮತ್ತು 586 ರಲ್ಲಿ ದೇವಾಲಯದ ಬೆಲೆಬಾಳುವ ವಸ್ತುಗಳನ್ನು ಬಾಬಿಲೋನಿಯದ ದೇವರುಗಳನ್ನು ಆರಾಧಿಸಲು ಬಳಸಲಾಗುವುದಕ್ಕೆ ದೋಚಿಕೊಂಡು ಹೋದವನು ಇವನೇ (ಉದಾಹರಣೆಗೆ, ದಾನಿ. 5:1-4 ನೋಡಿರಿ). ಯೆರೂಸಲೇಮಿನಿಂದ ಕೊಳ್ಳೆಯಾಗಿ ತಂದು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದ ಯೆಹೋವನ ಆಲಯದ ಸಾಮಾನುಗಳನ್ನು ಪರ್ಷಿಯ ರಾಜನಾದ ಕೋರೆಷನು ಅಲ್ಲಿಂದ ತೆಗೆಸಿದನು. 8 ಅವನು ಅವುಗಳನ್ನು ಖಜಾನೆಯ ಅಧಿಕಾರಿಯಾದ ಮಿತ್ರದಾತನಿಗೆ ಒಪ್ಪಿಸಿದನು. ಇವನು ಅವುಗಳನ್ನು ಯೆಹೂದದ ಪ್ರಭುವಾಗಿರುವ ಶೆಷ್ಬಚ್ಚರನಿಗೆ ಲೆಕ್ಕಮಾಡಿ ಕೊಟ್ಟನು. 9 ಆ ಸಾಮಾನುಗಳ ಲೆಕ್ಕ: ಬಂಗಾರದ ಬೋಗುಣಿಗಳು ಮೂವತ್ತು; ಬೆಳ್ಳಿಯ ಬೋಗುಣಿಗಳು ಒಂದು ಸಾವಿರ; ಕತ್ತಿಗಳು ಇಪ್ಪತ್ತೊಂಭತ್ತು; 10 ಚಿನ್ನದ ಬಟ್ಟಲುಗಳು ಮೂವತ್ತು; ಎರಡನೆಯ ದರ್ಜೆಯ ಬೆಳ್ಳಿಯ ಬಟ್ಟಲುಗಳು ನಾನೂರಹತ್ತು ಮತ್ತು ಇತರ ಪಾತ್ರೆಗಳು ಒಂದು ಸಾವಿರ. 11 ಬೆಳ್ಳಿಬಂಗಾರದ ಎಲ್ಲಾ ಸಾಮಾನುಗಳ ಒಟ್ಟು ಸಂಖ್ಯೆಯು ಐದು ಸಾವಿರದ ನಾನೂರು. ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಂದನು.

Estes versículos te tocaram? Ore agora!

+581 estão orando agora.

Junte-se à corrente de oração.