ಯೇಸು ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿದ್ದು ಲೇವಿವಂಶದ ಯಾಜಕರಿಗಿಂತಲೂ ಶ್ರೇಷ್ಠನು
1 7:1 ಆದಿ 14:17-20: ಈ ಮೆಲ್ಕಿಜೆದೇಕನು 7:1 ಆದಿ 33:18; ಕೀರ್ತ 76:2:ಸಾಲೇಮಿನ ಅರಸನೂ 7:1 ಅರಣ್ಯ 24:16; ಧರ್ಮೋ 32:8; ಮಾರ್ಕ 5:7:ಮಹೋನ್ನತನಾದ ದೇವರ ಯಾಜಕನೂ ಆಗಿದ್ದನು. ಈತನು ರಾಜರನ್ನು ಸಂಹಾರ ಮಾಡಿ ಹಿಂದಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು. 2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. "ಮೆಲ್ಕಿಜೆದೇಕ್", ಎಂಬ ಹೆಸರಿಗೆ ಮೊದಲು "ನೀತಿಯ ರಾಜ" ಎಂದೂ, ಅನಂತರ "ಸಾಲೇಮಿನ ರಾಜ" ಎಂದರೆ "ಸಮಾಧಾನದ ರಾಜ" ಎಂದೂ ಅರ್ಥ. 4 ಈತನು ಎಷ್ಟು ಮಹಾನ್ ಆಗಿದ್ದನೆಂದು ಯೋಚಿಸಿರಿ. 7:4 ಅ. ಕೃ. 7:8,9:ನಮ್ಮ ಮೂಲಪಿತೃವಾದ ಅಬ್ರಹಾಮನು ತಾನು ಯುದ್ಧದಲ್ಲಿ ಗೆದ್ದು ತಂದ ಶ್ರೇಷ್ಠ ವಸ್ತುಗಳಲ್ಲಿ ಹತ್ತರಲ್ಲಿ ಒಂದು ಭಾಗವನ್ನು ಅವನಿಗೆ ಕೊಟ್ಟನಲ್ಲಾ. 9 ಮತ್ತು ದಶಮ ಭಾಗಗಳನ್ನು ತೆಗೆದುಕೊಳ್ಳುವ ಲೇವಿಯು ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿತು. 10 ಹೇಗೆಂದರೆ, ಮೆಲ್ಕಿಜೆದೇಕನು ಲೇವಿಯ ಮೂಲಪುರುಷನಾದ ಅಬ್ರಹಾಮನನ್ನು ಸಂಧಿಸಿದಾಗ ಲೇವಿಯು ತತ್ವರೂಪವಾಗಿ ಅಬ್ರಹಾಮನ ದೇಹದಲ್ಲಿದ್ದನು.