40 ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಒಬ್ಬನು. 41 ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ "ನಾವು ಮೆಸ್ಸೀಯನನ್ನು ಕಂಡುಕೊಂಡೆವು" (ಮೆಸ್ಸೀಯನು ಎಂದರೆ 1:41 ಕ್ರಿಸ್ತನು ಎಂದರೆ ಅಭಿಷೇಕ ಹೊಂದಿದವನು, ಬರಬೇಕಾದ ರಕ್ಷಕನು. ಕ್ರಿಸ್ತನು) ಎಂದು ಹೇಳಿ,