Publicidade

Oséias 3

ಹೋಶೇಯನು ತನ್ನ ಪತ್ನಿಯನ್ನು ಮರಳಿ ಕರೆತಂದದ್ದು

1 ಯೆಹೋವನು ನನಗೆ, "ನೀನು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು, ದೀಪದ್ರಾಕ್ಷೆಯ ಅಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವನು ಪ್ರೀತಿಸುವ ಪ್ರಕಾರ, ನೀನು ಜಾರನಿಗೆ ಪ್ರಿಯಳೂ, ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸುತ್ತಾ ಬಾ" ಎಂದು ಅಪ್ಪಣೆ ಕೊಟ್ಟನು. 2 ಆಗ ನಾನು ಹದಿನೈದು ಬೆಳ್ಳಿ ನಾಣ್ಯಗಳನ್ನೂ ಮತ್ತು ಒಂದುವರೆ ಹೋಮೆರ್ ಜವೆಗೋದಿಯನ್ನೂ ಕೊಟ್ಟು ಅವಳನ್ನು ಕೊಂಡುಕೊಂಡೆನು. 3 ನಾನು ಅವಳಿಗೆ, "ನನಗಾಗಿ ಬಹು ದಿನಗಳು ತಾಳಿಕೊಂಡಿರು; ವ್ಯಭಿಚಾರ ಮಾಡಬೇಡ, ಯಾರೊಂದಿಗೂ ವ್ಯಭಿಚಾರಮಾಡಬೇಡ. ನಾನು ಸಹ ನಿನ್ನವನೇ, ನಿನ್ನ ಸಂಗಡ ವಾಸಿಸುವೆನು" ಎಂದು ಹೇಳಿದೆನು.

4 ಇದರಂತೆ ರಾಜಮುಖಂಡ, ಯಜ್ಞ, ಸ್ತಂಭ, ಏಫೋದು, ವಿಗ್ರಹಗಳಿಲ್ಲದೆ ಇಸ್ರಾಯೇಲರು ಬಹಳ ದಿನಗಳು ತಾಳಿಕೊಂಡಿರುವರು. 5 ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ಮತ್ತು ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು. ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ, ಆತನ ದಯೆಯನ್ನೂ ಭಯಭಕ್ತಿಯಿಂದ ಪಡೆಯುವರು.

Veja também

Publicidade
Oséias
Ver todos os capítulos de Oséias
Bíblia Online Bíblia Online

Bíblia Online • Versão: 2026-06-16_06-50-08-