45 ಫಿಲಿಪ್ಪನು ನತಾನಯೇಲನನ್ನು ಕಂಡು ಅವನಿಗೆ "ಮೋಶೆಯು ಧರ್ಮಶಾಸ್ತ್ರದಲ್ಲಿ ಯಾರ ವಿಷಯವಾಗಿ ಬರೆದನೋ ಮತ್ತು ಪ್ರವಾದಿಗಳು ಯಾರ ವಿಚಾರವಾಗಿ ಬರೆದರೋ ಆತನು ನಮಗೆ ಸಿಕ್ಕಿದನು, ಆತನು ಯಾರೆಂದರೆ ಯೋಸೇಫನ ಮಗನಾದ ನಜರೇತಿನ ಯೇಸುವೇ" ಎಂದು ಹೇಳಿದನು. 46 ನತಾನಯೇಲನು "ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?" ಎಂದು ಕೇಳಲು, ಫಿಲಿಪ್ಪನು "ಬಂದು ನೋಡು," ಅಂದನು. 47 ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು ಕಂಡು ಅವನನ್ನು ಕುರಿತು "ಇಗೋ, 1:47 ರೋಮಾ. 9:4,6:ಇವನು ನಿಜವಾದ ಇಸ್ರಾಯೇಲನು, 1:47 ಕೀರ್ತ 32:2:ಇವನಲ್ಲಿ ಕಪಟವಿಲ್ಲ" ಎಂದು ಹೇಳಿದನು. 48 ಅದಕ್ಕೆ ನತಾನಯೇಲನು "ನೀನು ನನ್ನನ್ನು ಹೇಗೆ ಬಲ್ಲೆ?" ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು "ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮೊದಲೇ ನೀನು ಆ ಅಂಜೂರದ ಮರದ ಕೆಳಗಿರುವುದನ್ನು ನಾನು ನೋಡಿದೆನು" ಎಂದು ಹೇಳಿದನು. 49 ಅದಕ್ಕೆ ನತಾನಯೇಲನು, "ಗುರುವೇ, ನೀನು ದೇವಕುಮಾರನು! ನೀನೇ ಇಸ್ರಾಯೇಲಿನ ಅರಸನು" ಎಂದನು. 50 ಅದಕ್ಕೆ ಯೇಸು "ಆ ಅಂಜೂರದ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ನಾನು ನಿನಗೆ ಹೇಳಿದ ಮಾತ್ರಕ್ಕೆ ನಂಬುತ್ತೀಯೋ? ನೀನು ಇವುಗಳಿಗಿಂತಲೂ ಹೆಚ್ಚಿನ ಮಹತ್ಕಾರ್ಯಗಳನ್ನು ನೋಡುವೆ," ಎಂದನು. 51 ಯೇಸು "ನಾನು ನಿಮಗೆ ನಿಜ ನಿಜವಾಗಿ ಹೇಳುತ್ತೇನೆ. 1:51 ಯೆಹೆ. 1:1:ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ 1:51 ಆದಿ 28:12:ದೇವದೂತರು ಏರುತ್ತಾ ಇಳಿಯುತ್ತಾ ಇರುವುದನ್ನೂ ನೀವು ನೋಡುವಿರಿ" ಎಂದು ಹೇಳಿದನು.