Pular para o conteúdo
Publicidade

ಪ್ರಕಟನೆ 17:1-4

OKCV Kannada Contemporary Version

ಮೃಗದ ಮೇಲಿನ ಸ್ತ್ರೀ

1 ಏಳು ಬೋಗುಣಿಗಳನ್ನು ಹಿಡಿದಿದ್ದ ಏಳು ದೂತರಲ್ಲೊಬ್ಬನು ನನಗೆ, "ಬಾ, ಬಹಳ ನೀರುಗಳ ಮೇಲೆ ಕುಳಿತಿರುವ ಮಹಾಜಾರಸ್ತ್ರೀಗಾಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ. 2 ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು," ಎಂದು ಹೇಳಿದನು.

3 ಅನಂತರ ಅವನು ನನ್ನನ್ನು ಆತ್ಮನಲ್ಲಿ ಅರಣ್ಯಕ್ಕೆ ಒಯ್ದನು. ಅಲ್ಲಿ ಒಬ್ಬ ಸ್ತ್ರೀಯು, ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದು, ದೇವದೂಷಣೆಯ ಹೆಸರುಗಳಿಂದ ತುಂಬಿರುವ ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿರುವುದನ್ನು ಕಂಡೆನು. 4 ಆ ಸ್ತ್ರೀಯು ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ, ಅಮೂಲ್ಯವಾದ ಹರಳು, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದ ವಸ್ತುಗಳಿಂದಲೂ ಮತ್ತು ತನ್ನ ಅಶುದ್ಧ ಅನೈತಿಕತೆಯಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.

Em outras traduções

  1. SII25 Bíblia Siddi

    1 ತನ್ನಾ ಸಾತ್ ಕಟೊರೆ ಧರಲ್ಲ್ಯಾ ಸಾತ್ ದೆವ್‍ದುತಾನಿತ್ಲೊ ಎಕ್ಲೊ ಮಾಜ್ಯಾಕ್ಡೆ ಯೆಲೊ, ಅನಿ "ಯೆ, ಮಿಯಾ ತುಕಾ ಎಕ್ ಸಗ್ಳ್ಯಾಕ್ಡೆ ಗೊತ್ತ್ ಹೊತ್ತ್ಯಾ ವೆಭಿಚಾರ್ ಕರ್ತಲ್ಯಾ ಬಾಯ್ಕೊಮನ್ಸಿಕ್ ಶಿಕ್ಷಾ ದಿತಲೆ ದಾಕ್ವುತಾ, ತೆ ಶಾರ್ ಸುಮಾರ್ ನ್ಹಯಾಂಚ್ಯಾ ಜಗ್ಗೊಳ್ ಭಾಂದಲ್ಲೆ ಹಾಯ್. 2 ಜಗಾಚ್ಯಾ ಸಗ್ಳ್ಯಾ ರಾಜಾನಿ ತಿಚೆಕ್ನಾ ಆಂಗಾಚೊ ಸಮ್ಮಂದ್ ಕರ್‍ಲ್ಯಾನಾತ್, ಅನಿ ಜಗಾತ್ಲಿ ಲೊಕಾ ತಿಚ್ಯಾ ಬುರ್ಶ್ಯಾಪಾನಾಚ್ಯಾ ಆಯ್ದಾನಾತ್ಲೆ ವಾಯ್ನ್ ಫಿವ್ನ್ ಫಿದೊಡೆ ಹೊವ್ನ್ ಗೆಲ್ಯಾತ್." ಮಟ್ಲ್ಯಾನ್.

    3 ಪವಿತ್ರ್ ಆತ್ಮ್ಯಾನುಚ್ ಮಾಕಾ ಚಾಲ್ವುನ್ ನ್ಹೆಲ್ಯಾನ್ ಅನಿ ದೆವಾಚ್ಯಾ ದುತಾನ್ ಮಾಕಾ ಡಂಗ್ಳಿತ್ ಉಕ್ಲುನ್ ನ್ಹೆಲ್ಯಾನ್, ಥೈ ಎಕ್ ತಾಂಬ್ಡ್ಯಾ ಭಯಾನಕ್ ಜನಾವಾರಾಚ್ಯಾ ವರ್ತಿ ಬಸಲ್ಲಿ ಬಾಯ್ಕೊಮನುಸ್ ಹೊತ್ತಿ, ತ್ಯಾ ಭಯಾನಕ್ ಜನಾವಾರಾಚ್ಯಾ ವರ್ತಿ ದೆವಾಕ್ ಅವ್ಮಾನ್ ಕರ್ತಲಿ ನಾವಾ ಲಿವಲ್ಲಿ ಹೊತ್ತಿ; ತ್ಯಾ ಭಯಾನಕ್ ಜನಾವಾರಾಚಿ ಸಾತ್ ಟಕ್ಲಿ ಅನಿ ಧಾ ಶಿಂಗಾ ಹೊತ್ತಿ. 4 ತ್ಯಾ ಬಾಯ್ಕೊಮಸ್ಸಿನ್ ಜಾಂಬ್ಳೆ ಕಪ್ಡೆ ನೆಸಲ್ಲಿನ್ ಅನಿ ಸೊನಾಚ್ಯಾ ಅನಿ ಲೈ ಕಿಮ್ತಿಚ್ಯಾ ಫೊಡ್ಯಾನಿ ಅನಿ ಮೊತಿಯಾನಿ ಶಿಂಗಾರ್ ಕರುನ್ ಘೆಟಲ್ಲಿನ್. ತೆನಿ ಅಪ್ನಾಚ್ಯಾ ಹಾತಾತ್ನಿ ಪೊಜ್ಡ್ಯಾನಿ ಅನಿ ವ್ಯೆಬಿಚಾರಾಚ್ಯಾ ಕಾಮಾಚ್ಯಾ ಬುರ್ಶ್ಯಾ ಸಾಮಾನಾನಿ ಭರಲ್ಲೆ ಸೊನಾಚೆ ಆಯ್ದಾನ್ ಧರಲ್ಲಿನ್‍.

  2. IRVKAN Indian Revised Version (IRV) - Kannada - 2019

    1 17:1 ಪ್ರಕ 15:7: ಏಳು ಬಟ್ಟಲುಗಳನ್ನು ಹಿಡಿದಿದ್ದ 17:1 ಪ್ರಕ 21:9ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು, "ಬಾ, 17:1 ಯೆರೆ 51:13; ಪ್ರಕ 17:15:ಬಹಳ ನೀರುಗಳ ಮೇಲೆ ಕುಳಿತ್ತಿರುವ 17:1 ನಹೂ. 3:4; ಪ್ರಕ 19:2; ಯೆಶಾ 1:21; ಯೆರೆ 2:20ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ. 2 17:2 ಅಥವಾ ಅವಳ ದುಷ್ಕರ್ಮವನ್ನು ನೋಡಿ. ಅವಳೊಂದಿಗೆ ಭೂರಾಜರು 17:2 ಅಂದರೆ, ದೇವದ್ರೋಹ; ಯೆಶಾ 23:17; ನಹೂ. 3:4:ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು 17:2 ಯೆರೆ 51:7; ಪ್ರಕ 14:8:ಮತ್ತರಾದರು" ಎಂದು ನನಗೆ ಹೇಳಿದನು. 3 ಆಗ ಅವನು ದೇವರಾತ್ಮವಶನಾದ ನನ್ನನ್ನು 17:3 ಪ್ರಕ 21:10; ಯೆರೆ 43:5:ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು 17:3 ಪ್ರಕ 12:3:ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ 17:3 ಪ್ರಕ 13:1ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. 17:3 ಪ್ರಕ 17:7, 9, 12:ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. 4 ಆ ಸ್ತ್ರೀಯು 17:4 ನೇರಳೆ. ಪ್ರಕ 18:16:ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ 17:4 ಯೆರೆ 51:7; ಪ್ರಕ 18:6:ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.