ಅಸಹ್ಯವಾದ ಆಚಾರಗಳು
9 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶಕ್ಕೆ ನೀವು ಬಂದಾಗ, ಆ ಜನಾಂಗಗಳು ಮಾಡುವ ಅಸಹ್ಯ ಕಾರ್ಯಗಳನ್ನು ನೀವು ಕಲಿಯಬಾರದು. 10 ತನ್ನ ಮಗನನ್ನು ಇಲ್ಲವೆ ಮಗಳನ್ನು ಆಹುತಿ ಕೊಡುವವನೂ, ಕಣಿ ಹೇಳುವವನೂ, ಶಕುನ ನೋಡುವವನೂ, ಸರ್ಪ ಮಂತ್ರದವನೂ, ಮಾಟಗಾರನೂ, 11 ಗಾರುಡಿಗಾರನೂ, ಯಕ್ಷಿಣಿಗಾರನೂ, ಮಂತ್ರಗಾರನೂ, ಸತ್ತವರ ಹತ್ತಿರ ವಿಚಾರಿಸುವವನೂ ನಿಮ್ಮಲ್ಲಿ ಇರಬಾರದು. 12 ಏಕೆಂದರೆ ಇಂಥವುಗಳನ್ನು ಮಾಡುವವರೆಲ್ಲಾ ಯೆಹೋವ ದೇವರಿಗೆ ಅಸಹ್ಯರಾಗಿದ್ದಾರೆ. ಈ ಅಸಹ್ಯಗಳ ನಿಮಿತ್ತವೇ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರದೂಡಿಸಿಬಿಡುತ್ತಾರೆ.