ಕ್ರಿಸ್ತನಲ್ಲಿ ಜೀವಂತವಾಗಿರುವುದು
1 ನೀವು ನಿಮ್ಮ ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಹಿಂದೊಮ್ಮೆ ಸತ್ತವರಾಗಿದ್ದೀರಿ. 4 ಆದರೆ ಕರುಣೆಯಲ್ಲಿ ಐಶ್ವರ್ಯವಂತರಾದ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿದರು. 5 ಹೇಗೆದಂರೆ, ಅಪರಾಧಗಳಲ್ಲಿ ಸತ್ತವರಾಗಿದ್ದರೂ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದರು. ಹೀಗೆ ನೀವು ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದ್ದೀರಿ. 8 ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದ್ದೀರಿ. ಈ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ದಾನವೇ. 9 ಯಾರಾದರೂ ಹೆಮ್ಮೆ ಪಡುವಂತೆ ಈ ರಕ್ಷಣೆಯು ಪುಣ್ಯಕ್ರಿಯೆಗಳಿಂದ ಉಂಟಾದದ್ದೂ ಅಲ್ಲ. 10 ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.