Pular para o conteúdo
Publicidade

ವಿಮೋಚನಕಾಂಡ 26:1,7,14,15,31,33

OKCV Kannada Contemporary Version

ದೇವದರ್ಶನದ ಗುಡಾರ

1 "ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಮಾಡಿದ ಕೆರೂಬಿಗಳುಳ್ಳವುಗಳಾಗಿಯೂ ಇರಬೇಕು.

7 "ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಬೇಕು. 14 ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಬೇಕು, ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಬೇಕು.

15 "ಗುಡಾರಕ್ಕೆ ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಬೇಕು.

31 "ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಬೇಕು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು. 33 ಆ ಪರದೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ, ಪರದೆಯೊಳಗೆ ಒಡಂಬಡಿಕೆಯ ಮಂಜೂಷವನ್ನು ತರಬೇಕು. ಪರಿಶುದ್ಧ ಸ್ಥಳಕ್ಕೂ ಮಹಾಪರಿಶುದ್ಧ ಸ್ಥಳಕ್ಕೂ ಮಧ್ಯದಲ್ಲಿ ಆ ಪರದೆಯನ್ನು ವಿಂಗಡಿಸಬೇಕು.

Em outras traduções

  1. SII25 Bíblia Siddi

    1 ಮಾಕಾ ವಸ್ತಿ ರಾವ್ಕ್ ಮನುನ್ ಧಾ ಕಪ್ಡ್ಯಾನಿ ಜಾಗೊ ತಯಾರ್ ಕರುಚೆ, ತೆ ಕಪ್ಡೆ ನ್ಹವೆ ರಾವ್ಚೆ, ತ್ಯಾತುರ್ನಿ ಝಾಂಬ್ಳ್ಯಾ ಬನ್ನಾಚೆ ಅನಿ ರಗ್ತಾಚ್ಯಾ ಬನ್ನಾಚೆ ಕೆರುಬಿಯಾ ಹಾತಿನಿ ಚಮತ್ಕಾರಾಚೆ ಕಾಮ್ ಕರುನ್ ರಾವ್ಚೆ.

    7 ಬಕ್ರ್ಯಾಚ್ಯಾ ಕೆಸಾಂಚೆ ಆಕ್ರಾ ತುಕ್ಡೆ ಕಪ್ಡೆ ಹ್ಯಾ ಬಿಡಾರಾ ವರ್‍ತಿ ಕಾಂಬ್ರುಕ್ ಸಾಟ್ನಿ ಕರುಚೆ.

    14 ಹ್ಯಾ ಕಾಂಬ್ರಾನಾಕ್ ಕಾಂಬ್ರುಕ್ ಹಾದಾಕರಲ್ಲೆ ತಾಂಬ್ಡ್ಯಾ ಬನ್ನಾಚೆ ಬಕ್ರ್ಯಾಚ್ಯಾ ಕೆಸಾನಿ ಎಕ್ ವೈಲೆ ಕಾಂಬ್ರಾನ್ ಅನಿ ಸಮುಂದರಾಚ್ಯಾ ಡುಕ್ರಾಚ್ಯಾ ಕೆಸಾನಿ ಅನಿ ಎಕ್ ವೈಲೆ ಕಾಂಬ್ರಾನ್ ಕರ್ಸುಚೆ.

    15 ಬಿಡಾರಾಕ್ ಪಾಜೆ ಹೊಲ್ಲಿ ಚವ್ಕಟಾ ಜಾಲಿಚ್ಯಾ ಝಾಡಾನ್ ಕರ್ಸುಚೆ.

    31 ಪುಂಡಿಚ್ಯಾ ದೊರಿಯಾಂಚ್ಯಾ ಕಪ್ಡ್ಯಾತ್ನಿ ಝಾಂಬ್ಳ್ಯಾ ಬನ್ನಾಚ್ಯಾ ದೊರ್ಯಾನಿ ಕೆರುಬಿಯಾ ಚಮತ್ಕಾರಾಚ್ಯಾ ಕಾಮಾನಿ ಹಾತಿಚಿ ಸಿವನ್ ಘಾಲುನ್ ಎಕ್ ಪರ್ದೊ ಕರ್ಸುಚೆ. 33 ತೊ ಪರ್ದೊ ಕೊಂಡಿಯಾಕ್ನಿ ಸಿರಕಲ್ಲ್ಯಾ ತನ್ನಾ ತ್ಯಾತುರ್ ಕರಾರಾಚಿ ಪೆಟಿ ಹಾನುನ್ ಥವ್ಚೆ, ತೊ ಪರ್ದೊ ನಿತಳ್ ಜಾಗೊ ಅನಿ ಅಗ್ದಿ ನಿತಳ್ ಜಾಗೊ ಮನ್ತಲೆ ಎಗ್ಳೆ ಎಗ್ಳೆ ಕರ್ತಾ.

  2. IRVKAN Indian Revised Version (IRV) - Kannada - 2019

    1 ನನ್ನ ನಿವಾಸಕ್ಕಾಗಿ ಒಂದು ಗುಡಾರವನ್ನು ಹತ್ತು ಪರದೆಗಳಿಂದ ಮಾಡಿಸಬೇಕು. ಅವು ನಯವಾಗಿ ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ, ನೇರಳೆ ಮತ್ತು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳನ್ನು ನೇಯ್ಗೆಯಿಂದ ಕಸೂತಿ ಹಾಕಿಸಬೇಕು.

    7 ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಆಡಿನ ರೋಮದಿಂದ ಹನ್ನೊಂದು ಪರದೆಗಳನ್ನು ಮಾಡಿಸಬೇಕು. 14 ಈ ಹೊದಿಕೆಗೆ ಹೊದಿಸುವುದಕ್ಕಾಗಿ ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನು 26:14 ಕೆಲವು ಅನುವಾದಗಳಲ್ಲಿ ಕಡಲು ಹಂದಿ.ಕಡಲಪ್ರಾಣಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನು ಮಾಡಿಸಬೇಕು.

    15 ಗುಡಾರಕ್ಕೆ ಬೇಕಾದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿಸಬೇಕು.

    31 ನೀಲಿ, ನೆರಳೆ, ಕಡುಗೆಂಪು ವರ್ಣಗಳು ಹಾಗೂ ನಯವಾಗಿ ಹೊಸೆದ ಹತ್ತಿಯ ನೂಲಿನಿಂದ ಪರದೆಯನ್ನು ಮಾಡಿಸಿ, ಅದಕ್ಕೆ ಕೆರೂಬಿಗಳಿಗಾಗಿ ಕೌಶಲ್ಯಪೂರ್ಣವಾಗಿ ಕಸೂತಿ ಹಾಕಿಸಬೇಕು. 33 ಆ ಪರದೆಯನ್ನು ಕೊಂಡಿಗಳಿಗೆ ಸಿಕ್ಕಿಸಿದಾಗ ಅದರೊಳಗೆ ಆಜ್ಞಾಶಾಸನಗಳ ಮಂಜೂಷವನ್ನು ತರಿಸಿಡಬೇಕು. ಆ ಪರದೆಯು ಪವಿತ್ರಸ್ಥಾನವೆಂಬುದನ್ನೂ ಮತ್ತು ಮಹಾಪವಿತ್ರಸ್ಥಾನವನ್ನೂ ವಿಂಗಡಿಸುವುದು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.