Pular para o conteúdo
Publicidade

ಆದಿಕಾಂಡ 37:3,4,28

OKCV Kannada Contemporary Version

3 ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನ ವಯಸ್ಸಿನಲ್ಲಿ ಹುಟ್ಟಿದ ಮಗನಾಗಿದ್ದುದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ, ಅವನಿಗೆ ಅನೇಕ ಬಣ್ಣಗಳ ಅಂಗಿಯನ್ನು ಹೊಲಿಸಿಕೊಟ್ಟನು. 4 ತಮ್ಮ ತಂದೆಯು ಅವನನ್ನು ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿಮಾಡುತ್ತಿರುವುದನ್ನು ಅವನ ಸಹೋದರರು ಕಂಡು, ಅವನನ್ನು ದ್ವೇಷಿಸಿ, ಅವನ ಸಂಗಡ ಸಮಾಧಾನದಿಂದ ಮಾತಾಡದೆಹೋದರು.

28 ಈ ಪ್ರಕಾರ ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ, ಅವರು ಯೋಸೇಫನನ್ನು ಗುಂಡಿಯಿಂದ ಮೇಲೆತ್ತಿ, ಇಷ್ಮಾಯೇಲರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ37:28 ಸುಮಾರು 230 ಗ್ರಾಂ ಮಾರಿದರು. ಅವರು ಯೋಸೇಫನನ್ನು ಈಜಿಪ್ಟಿಗೆ ಕರೆದುಕೊಂಡು ಹೋದರು.

Em outras traduções

  1. SII25 Bíblia Siddi

    3 ಇಜ್ರಾಯೆಲ್ ಲೈ ಮಾತಾರೊ ಹೊಲ್ಲ್ಯಾ ತನ್ನಾ ಜುಜೆ ಉಪಾಜಲ್ಲೊ ರ್‍ಹಾತಾ, ತಸೆ ಹೊವ್ನ್ ತೆಕಾ ತೊ ಸಗ್ಳ್ಯಾ ಲೆಕಾಂಚ್ಯಾಕಿಂತಾಬಿ ಲೈ ಪ್ರೆಮ್ ಕರುನ್ ತೆಕಾ ಎಕ್ ಝಗೊ ಸಿವ್ನ್ ದಿಲ್ಲ್ಯಾನ್.

    4 ಜುಜೆಕ್ ತೆಜೊ ಬಾಬಾ ಲೈ ಪ್ರೆಮ್ ಕರ್‍ತಲ್ಯಾ ವೈನಾ ತೆಚಿ ಭಾವಾ ಜುಜೆಚ್ ಬಗಟ್ಲ್ಯಾ ಸೆರ್ಯಿನಸಿತ್ ಅನಿ ಬರೆ ಕರುನ್ ಬೊಲಿನಸಿತ್.

    28 ಅನಿ ಮಿದ್ಯಾನಾಕ್ನಾ ಇಕುಕ್ ಜಾತಲೆ ಜಗ್ಗೊಳ್ ಯೆತಲೆ ಬಗುನ್, ತೆನಿ ಜುಜೆಕ್ ಭಾಂಯಿತ್ನಾ ವೈರ್ ಉಕ್ಲುನ್ ತೆಂಚ್ಯಾಕ್ನಾ ಇಸ್ ಚಾಂದಿಚೆ ಪೈಸೆ ಘೆವ್ನ್ ತೆಂಕಾ ಇಕ್ಲ್ಯಾನಿ, ಮಾನಾ ತ್ಯಾ ಯಾಪಾರಿಯಾನಿ ಜುಜೆಕ್ ಇಜಿಪ್ತಾಕ್ ದೆಸಾಕ್ ನ್ಹೆಲ್ಯಾನಿ.

  2. IRVKAN Indian Revised Version (IRV) - Kannada - 2019

    3 ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾಗಿದ್ದುದರಿಂದ ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನು, ಅಲ್ಲದೆ ಅವನಿಗೆ ಬಣ್ಣಬಣ್ಣದ ಒಂದು ನಿಲುವಂಗಿಯನ್ನು ಹೊಲಿಸಿ ಕೊಟ್ಟಿದ್ದನು. 4 ಅವನ ಅಣ್ಣತಮ್ಮಂದಿರು, ತಮ್ಮ ತಂದೆಯು ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದನ್ನು ನೋಡಿ ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತನಾಡಲಾರದೆ ಹೋದರು.

    28 ಅಷ್ಟರಲ್ಲಿ ಮಿದ್ಯಾನ್ಯರಾದ ವರ್ತಕರು ಹಾದುಹೋಗುತ್ತಿದ್ದರು. ಅವರು ಯೋಸೇಫನನ್ನು ಗುಂಡಿಯೊಳಗಿಂದ ಮೇಲೆ ಎತ್ತಿ ಆ ಇಷ್ಮಾಯೇಲ್ಯರಿಗೆ 37:28 230 ಗ್ರಾಂ ಬೆಳ್ಳಿ, ಇದು ಯುವ ದಾಸನಿಗಿರುವ ಬೆಲೆ.ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಅವನನ್ನು ಮಾರಿದರು. ಅವರು ಅವನನ್ನು ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.