Pular para o conteúdo
Publicidade

ಆದಿಕಾಂಡ 4:3-7

OKCV Kannada Contemporary Version

3 ಸ್ವಲ್ಪ ಕಾಲದ ತರುವಾಯ, ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು, ಯೆಹೋವ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4 ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು. 5 ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು.

6 ಆಗ ಯೆಹೋವ ದೇವರು ಕಾಯಿನನಿಗೆ, "ನೀನು ಕೋಪಗೊಂಡಿದ್ದೇಕೆ? ಏಕೆ ನಿನ್ನ ಮುಖವು ಬಾಡಿದೆ? 7 ನೀನು ಒಳ್ಳೆಯದನ್ನು ಮಾಡಿದರೆ, ನೀನು ಸ್ವೀಕಾರವಾಗುತ್ತಿದ್ದೆ ಅಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ, ಬಾಗಿಲಲ್ಲಿ ಪಾಪವು ಹೊಂಚಿಕೊಂಡಿರುವುದು ಮತ್ತು ಅದು ನಿನ್ನನ್ನು ನುಂಗಲು ಬಯಸುತ್ತದೆ. ಆದರೂ ನೀನು ಅದರ ಮೇಲೆ ಅಧಿಕಾರ ಮಾಡಬೇಕು," ಎಂದು ಹೇಳಿದರು.

Em outras traduções

  1. SII25 Bíblia Siddi

    3 ಲೈ ದಿಸಾನ್ ಕಾಯಿನಾನ್ ಅಪ್ನಾಚ್ಯಾ ಶೆತಾಚ್ಯಾ ಫಿಕೆತ್ಲೆ ಉಲ್ಲೆ ದೆವಾಕ್ ಕಾನಿಕ್ ದಿವ್ಕ್ ಹಾನ್ಲ್ಯಾನ್. 4 ತಸೆಚ್ ಅಬೆಲಾನ್ಬಿ ಅಪ್ಲ್ಯಾ ಶೆಳಿಯಾಂಚ್ಯಾ ತಾಂಡ್ಯಾತ್ಲ್ಯಾ ಶೆಳಿ ಹಾನುನ್ ತಿ ಕಾಪುನ್ ಬರೊಭಾಗ್ ಬಲಿ ಭೆಟ್ವುಲ್ಯಾನ್, ತನ್ನಾ ಸರ್ವೆಸ್ಪರಾನ್ ತೆಚಿ ಬಲಿ ಸ್ವಿಕಾರ್ ಕರ್ಲ್ಯಾನ್, 5 ಖರೆ ಕಾಯಿನಾಚಿ ಕಾನಿಕ್ ಸ್ವಿಕಾರ್ ಕರುಕ್ ನಾ ತೆಚ್ಯಾ ವೈನಾ ಕಾಯಿನ್ ಲೈ ರಾಗಾನ್ ಚಾವ್ತಾಳ್ಳೊ, ಅನಿ ತೆಚೆ ತೊಂಡ್ ಬಾವ್ಲೆ. 6 ತನ್ನಾ ಸರ್ವೆಸ್ಪರ್ ದೆವಾನ್ ಕಾಯಿನಾಕ್, "ಕಶ್ಯಾಕ್ ರಾಗಾರ್ ಹಾಸ್? ತುಜೆ ತೊಂಡ್ ಕಶ್ಯಾಕ್ ಬಾವ್ಲಾ? 7 ತಿಯಾ ಬರೆ ಕಾಮ್ ಕರಲ್ಲೆ ಹೊಲ್ಯಾರ್ ಮಿಯಾ ತುಜಿ ಕಾನಿಕ್ ಸ್ವಿಕಾರ್ ಕರಿ ಹೊತ್ತೊ, ಖರೆ ತಿಯಾ ಬುರ್ಸೆ ಕಾಮ್ ಕರಲ್ಯಾ ಸಾಟ್ನಿ ಪಾಪ್ ತುಕಾ ಧರುನ್ ತಾಬೆತ್ ಕರುನ್ ಘೆವ್ಕ್ ಸಾಟ್ನಿ ಹುಂಬ್ಡ್ಯಾತ್ ರಾಕುನ್ಗೆತ್ ಹಾಯ್, ತಿಯಾ ತೆಕಾ ತುಜ್ಯಾ ತಾಬೆತ್ ಥವ್ನ್ ಘೆವ್ಚೆ", ಮನುನ್ ಸಾಂಗ್ಲ್ಯಾನ್.

  2. IRVKAN Indian Revised Version (IRV) - Kannada - 2019

    3 ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4 ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮ ಮಾಡಿದನು, ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನು ಮೆಚ್ಚಿಕೊಂಡನು. 5 ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು, ಅವನ ಮುಖವು ಸಿಟ್ಟಿನಿಂದ ಕಳೆಗುಂದಿತು.

    6 ಆಗ ಯೆಹೋವನು ಕಾಯಿನನಿಗೆ, "ನೀನು ಕೋಪಗೊಂಡಿದ್ದೇಕೆ? 7 ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು" ಎಂದು ಹೇಳಿದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.