5 ಮನುಷ್ಯನ ದುಷ್ಟತನವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದೆಂದೂ ಯೆಹೋವ ದೇವರು ಕಂಡರು. 6 ಯೆಹೋವ ದೇವರು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ನಿಟ್ಟುಸಿರುಬಿಟ್ಟು, ತಮ್ಮ ಹೃದಯದಲ್ಲಿ ನೊಂದುಕೊಂಡರು. 7 ಇದಲ್ಲದೆ ಯೆಹೋವ ದೇವರು, "ನಾನು ಸೃಷ್ಟಿಸಿದ ಮನುಷ್ಯನಿಂದ ಹಿಡಿದು, ಸಕಲ ಪ್ರಾಣಿ, ಆಕಾಶದ ಪಕ್ಷಿಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನು, ಭೂಮಿಯ ಮೇಲಿನಿಂದ ಎಲ್ಲವನ್ನು ನಾಶಮಾಡುವೆನು. ನಾನು ಅವರನ್ನು ಉಂಟುಮಾಡಿದ್ದಕ್ಕೆ ದುಃಖಪಡುತ್ತೇನೆ," ಎಂದರು. 8 ಆದರೆ ನೋಹನಿಗೆ ಯೆಹೋವ ದೇವರ ದಯೆ ದೊರಕಿತು.
ನೋಹ ಮತ್ತು ಜಲಪ್ರಳಯ
9 ಇದು ನೋಹನ ಮತ್ತು ಅವನ ವಂಶದವರ ಚರಿತ್ರೆ:
ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ನಿರ್ದೋಷಿಯೂ ಆಗಿದ್ದನು. ಅವನು ದೇವರೊಂದಿಗೆ ವಿಶ್ವಾಸದಿಂದ ನಡೆಯುತ್ತಿದ್ದನು.