ಅವಿಶ್ವಾಸದ ವಿರುದ್ಧ ಎಚ್ಚರಿಕೆ
7 ಆದ್ದರಿಂದ ಪವಿತ್ರಾತ್ಮ ದೇವರು ಹೇಳುವ ಪ್ರಕಾರ,
"ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
8 ಅರಣ್ಯದಲ್ಲಿದ್ದಾಗ ನನ್ನನ್ನು ಪರೀಕ್ಷಿಸಿದ
ದಿನದಲ್ಲಿ ಕೋಪಕ್ಕೆ ಈಡುಮಾಡಿದಂತೆ,
ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ.
12 ಪ್ರಿಯರೇ, ದೇವರನ್ನು ಬಿಟ್ಟುಹೋಗುವ ಅವಿಶ್ವಾಸಯುಳ್ಳ ದುಷ್ಟ ಹೃದಯವು ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ. 13 ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ, "ಈ ಹೊತ್ತು" ಎಂಬುದು ಇರುವವರೆಗೆ ಪ್ರತಿದಿನವೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ. 15 ಈಗಲೇ ಹೇಳಿದಂತೆ:
"ನೀವು ಈ ಹೊತ್ತು ದೇವರ ಸ್ವರವನ್ನು ಕೇಳಿದರೆ,
ತಿರುಗಿಬಿದ್ದಾಗ ನಡೆದಂತೆ
ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ."3:15 ಕೀರ್ತನೆ 95:7,8