Pular para o conteúdo
Publicidade

ಯೆರೆಮೀಯ 29:4-7

OKCV Kannada Contemporary Version

4 ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಯೆರೂಸಲೇಮಿನಿಂದ ಬಾಬಿಲೋನಿಗೆ ನಾನು ಕರೆದೊಯ್ದ ಸೆರೆಯವರೆಲ್ಲರಿಗೆ ಹೇಳುವುದೇನೆಂದರೆ: 5 "ಮನೆಗಳನ್ನು ಕಟ್ಟಿ ವಾಸಮಾಡಿರಿ. ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ತಿನ್ನಿರಿ. 6 ಮದುವೆಮಾಡಿಕೊಂಡು, ಪುತ್ರಪುತ್ರಿಯರನ್ನು ಪಡೆಯಿರಿ. ನಿಮ್ಮ ಪುತ್ರರಿಗೆ ಹೆಂಡತಿಯರನ್ನು ಹುಡುಕಿರಿ. ನಿಮ್ಮ ಪುತ್ರಿಯರನ್ನು ಮದುವೆಮಾಡಿಕೊಡಿರಿ; ಅವರು ಪುತ್ರಪುತ್ರಿಯರನ್ನು ಹೆರಲಿ. ಹೀಗೆ ನೀವು ಕಡಿಮೆಯಾಗದೆ, ಅಲ್ಲಿ ಹೆಚ್ಚಿರಿ. 7 ನಾನು ನಿಮ್ಮನ್ನು ಸೆರೆಯಾಗಿ ಒಯ್ದ ಪಟ್ಟಣದ ಸಮಾಧಾನ ಮತ್ತು ಸಮೃದ್ಧಿಯನ್ನು ಹುಡುಕಿರಿ. ಅದಕ್ಕೋಸ್ಕರ ಯೆಹೋವ ದೇವರಿಗೆ ಪ್ರಾರ್ಥನೆಮಾಡಿರಿ. ಏಕೆಂದರೆ ಅದರ ಸಮಾಧಾನದಿಂದ ನಿಮಗೆ ಸಮಾಧಾನವಾಗುವುದು."

Em outras traduções

  1. IRVKAN Indian Revised Version (IRV) - Kannada - 2019

    4 ಅದರಲ್ಲಿ, "ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಸಾಗಿಸಿದ ಸೆರೆಯವರೆಲ್ಲರಿಗೂ ಹೀಗೆ ಹೇಳುತ್ತಾನೆ, 5 ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಅವುಗಳ ಫಲವನ್ನು ಅನುಭವಿಸಿರಿ. 6 ಸಂಸಾರಿಗಳಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೆ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳಿರಿ, ನಿಮ್ಮ ಹೆಣ್ಣುಮಕ್ಕಳಿಗೆ ಗಂಡುಮಕ್ಕಳನ್ನು ಕೊಡಿರಿ; ಅವರೂ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಲಿ; ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕೊರತೆ ಅನುಭವಿಸದಿರಿ. 7 ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ, ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.