Pular para o conteúdo
Publicidade

ಯೆರೆಮೀಯ 45

ಬಾರೂಕನಿಗೆ ಸಂದೇಶ

1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೆಯ ವರ್ಷದಲ್ಲಿ ನೇರೀಯನ ಮಗನಾದ ಬಾರೂಕನ ಈ ಮಾತುಗಳನ್ನು ಯೆರೆಮೀಯನ ಬಾಯಿಂದ ಬಂದ ಹಾಗೆ, ಸುರುಳಿಯಲ್ಲಿ ಬರೆದ ಮೇಲೆ ಪ್ರವಾದಿಯಾದ ಯೆರೆಮೀಯನು ಅವನಿಗೆ ಹೇಳಿದ ವಾಕ್ಯವೇನೆಂದರೆ, 2 "ಬಾರೂಕನೇ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ನಿನ್ನನ್ನು ಕುರಿತು ಹೀಗೆ ಹೇಳುತ್ತಾರೆ. 3 ‘ಈಗ ನನಗೆ ಕಷ್ಟ! ಏಕೆಂದರೆ, ಯೆಹೋವ ದೇವರು ನನ್ನ ನೋವಿಗೆ ಚಿಂತೆಯನ್ನು ಕೂಡಿಸಿದ್ದಾರೆ. ನಿಟ್ಟುಸಿರು ಬಿಡುವುದರಿಂದ ದಣಿದಿದ್ದೇನೆ. ವಿಶ್ರಾಂತಿಯನ್ನು ಕಾಣೆನೆಂದು ನೀನು ಹೇಳಿದಿಯಲ್ಲಾ.’ 4 ಆದರೆ ನಿಮಗೆ ಹೇಳಲು ಯೆಹೋವ ದೇವರು ನನಗೆ ಹೇಳಿದ್ದಾರೆ. ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಕಟ್ಟಿದ್ದನ್ನು ಕೆಡವಿಬಿಡುತ್ತೇನೆ; ನಾನು ನೆಟ್ಟದ್ದನ್ನು ಕಿತ್ತು ಹಾಕುತ್ತೇನೆ. ಹೌದು, ಈ ಸಮಸ್ತ ದೇಶವನ್ನೇ ನಾಶಮಾಡುತ್ತೇನೆ. 5 ಹಾಗಾದರೆ ನೀನು ನಿನಗೋಸ್ಕರ ದೊಡ್ಡವುಗಳನ್ನು ಹುಡುಕುತ್ತೀಯೋ? ಹುಡುಕಬೇಡ. ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ. ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನೀನು ಉಳಿಸಿಕೊಳ್ಳುವಂತೆ ಮಾಡುವೆನು, ಎಂದು ನಿನಗೆ ಹೇಳಿದ್ದಾರೆ,’ ಎಂದನು."

Estes versículos te tocaram? Ore agora!

+581 estão orando agora.

Junte-se à corrente de oração.