Pular para o conteúdo
Publicidade

ಯೆಶಾಯನು 9:1-6

IRVKAN Indian Revised Version (IRV) - Kannada - 2019

ನಮಗಾಗಿ ಒಂದು ಮಗುವು ಹುಟ್ಟಿತು

1 ಆದರೆ ಸಂಕಟಪಟ್ಟ ದೇಶಕ್ಕೆ ಅಂಧಕಾರವಿಲ್ಲ.

ಪೂರ್ವಕಾಲದಲ್ಲಿ ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳನ್ನು,

ಆತನು ಅವಮಾನಕ್ಕೆ ಗುರಿಮಾಡಿದನು.

ಅನಂತರದಲ್ಲಿ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯವನ್ನೆಲ್ಲಾ ಘನಪಡಿಸಿದ್ದಾನೆ.

2 ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು.

ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು.

3 ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ.

ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ. ಸುಗ್ಗಿ ಕಾಲದಲ್ಲಿ ಜನರು ಹರ್ಷಿಸುವ ಹಾಗೂ,

ಕೊಳ್ಳೆಯನ್ನು ಹಂಚಿಕೊಳ್ಳುವವರು, ಹೆಚ್ಚಳಪಡುವವರು ನಿನ್ನ ಮುಂದೆ ಆನಂದಿಸುತ್ತಾರೆ.

4 ಅವರಿಗೆ ಭಾರವಾದ ನೊಗವನ್ನೂ, ಬೆನ್ನನ್ನು ಹೊಡೆದ ಕೋಲನ್ನೂ,

ಬಿಟ್ಟೀ ಹಿಡಿದವನ ದೊಣ್ಣೆಯನ್ನೂ ಮಿದ್ಯಾನಿನ ನಾಶನದ ದಿನದಲ್ಲಿ ಮುರಿದುಬಿಟ್ಟಂತೆ ಮುರಿದು ಬಿಟ್ಟಿದ್ದೀ.

5 ಯುದ್ಧದ ಗದ್ದಲದಲ್ಲಿ ತುಳಿದಾಡಿದವರೆಲ್ಲರ ಪಾದರಕ್ಷೆಗಳೂ,

ರಕ್ತದಲ್ಲಿ ಅದ್ದಿದ ಉಡುಪುಗಳೂ,

ಅಗ್ನಿಗೆ ಆಹಾರವಾಗಿ ಸುಟ್ಟುಹೋಗುವವು.

6 ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ,

ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು;

ಅದ್ಭುತ ಸ್ವರೂಪನು, ಆಲೋಚನಾ ಕರ್ತನು,

ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ,

ಸಮಾಧಾನದ ಪ್ರಭು ಎಂಬುದು ಆತನ ಹೆಸರು.

Em outras traduções

  1. OKCV Kannada Contemporary Version

    1 ಆದರೂ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬುಲೂನ್ ನಾಡು ಮತ್ತು ನಫ್ತಾಲಿ ನಾಡುಗಳನ್ನು ಅವರು ಅವಮಾನಕ್ಕೆ ಗುರಿಮಾಡಿ, ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಇತರ ಜನರಿರುವ ಗಲಿಲಾಯ ನಾಡು, ಈ ಪ್ರಾಂತವನ್ನೆಲ್ಲಾ ಘನಪಡಿಸಿದ್ದಾರೆ.

    2 ಕತ್ತಲೆಯಲ್ಲಿ ನಡೆಯುವ ಈ ಜನರಿಗೆ

    ಮಹಾ ಬೆಳಕು ಕಾಣಿಸಿತು,

    ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ

    ಬೆಳಕು ಉದಯಿಸಿತು.

    3 ನೀವು ಜನಾಂಗವನ್ನು ವೃದ್ಧಿಗೊಳಿಸಿದ್ದೀರಿ

    ಮತ್ತು ಸಂತೋಷವನ್ನು ಹೆಚ್ಚಿಸಿದ್ದೀರಿ.

    ಸುಗ್ಗಿ ಕಾಲದ ಸಂತೋಷದಂತೆಯೂ,

    ಕೊಳ್ಳೆಯನ್ನು ಹಂಚಿಕೊಳ್ಳುವಾಗ

    ಉಲ್ಲಾಸಿಸುವ ಹಾಗೆಯೂ ನಿಮ್ಮ

    ಮುಂದೆ ಸಂತೋಷಿಸುವರು.

    4 ಏಕೆಂದರೆ ಅವನ ನೊಗವನ್ನೂ,

    ಬೆನ್ನನ್ನು ಹೊಡೆದ ಕೋಲನ್ನೂ,

    ಬಿಟ್ಟೀ ಹಿಡಿದವನ ದೊಣ್ಣೆಯನ್ನೂ,

    ಮಿದ್ಯಾನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀರಿ.

    5 ಯುದ್ಧವೀರರ ಪ್ರತಿ ಯುದ್ಧವು ಗಲಿಬಿಲಿಯ ಗದ್ದಲದಿಂದ

    ರಕ್ತದಲ್ಲಿ ಹೊರಳಾಡಿಸಿದ ವಸ್ತ್ರಗಳು ಆಗಿರುತ್ತವೆ.

    ಆದರೆ ಇವು ಬೆಂಕಿಗೆ ಆಹುತಿಯಾಗುತ್ತವೆ.

    ಅದು ಬೆಂಕಿಗೆ ಇಂಧನವಾಗಿರುತ್ತದೆ.

    6 ಏಕೆಂದರೆ ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ,

    ಆ ಮಗನನ್ನು ನಮಗಾಗಿ ಕೊಡಲಾಗಿದೆ.

    ಆಡಳಿತವು ಅವರ ಬಾಹುವಿನ ಮೇಲಿರುವುದು,

    ಅದ್ಭುತವಾದವರು ಸಮಾಲೋಚಕರು,

    ಪರಾಕ್ರಮಿಯಾದ ದೇವರು, ನಿತ್ಯರಾದ ತಂದೆ,

    ಸಮಾಧಾನದ ಪ್ರಭು, ಎಂಬುದು ಅವರ ಹೆಸರಾಗಿರುವುದು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.