10 ನಾನು ಕರ್ತ ಯೇಸುವಿನ ದಿನದಲ್ಲಿ ಆತ್ಮಭರಿತನಾಗಿರಲು ನನ್ನ ಹಿಂದೆ ತುತೂರಿಯ ಶಬ್ದದಂತಿರುವ ಮಹಾಧ್ವನಿಯನ್ನು ಕೇಳಿದೆನು. 11 ಅದು, "ಕಾಣುತ್ತಿರುವುದನ್ನು ಸುರುಳಿಯಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯದಲ್ಲಿರುವ ಏಳು ಸಭೆಗಳಿಗೆ ಕಳುಹಿಸಬೇಕು," ಎಂದು ನುಡಿಯಿತು.
Publicidade
Publicidade