Pular para o conteúdo
Publicidade

ಪ್ರಕಟನೆ 22:1-5

OKCV Kannada Contemporary Version

ಜೀವನದಿ

1 ಆಮೇಲೆ ದೂತನು ಸ್ಪಟಿಕದಂತೆ ಹೊಳೆಯುವ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಕುರಿಮರಿಯಾದವರ ಸಿಂಹಾಸನದಿಂದ ಹೊರಟು, 2 ಪಟ್ಟಣದ ಪ್ರಧಾನ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿ ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳಿಗೂ ಫಲವನ್ನು ಫಲಿಸುತ್ತಾ ಹನ್ನೆರಡು ಸಾರಿ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವಂಥದ್ದಾಗಿದ್ದವು. 3 ಇನ್ನು ಯಾವ ಶಾಪವೂ ಇರುವುದಿಲ್ಲ. ಅದರಲ್ಲಿ ದೇವರ ಮತ್ತು ಕುರಿಮರಿಯಾದವರ ಸಿಂಹಾಸನವಿರುವುದು. ದೇವರ ದಾಸರು ಅವರಿಗೆ ಸೇವೆಮಾಡುವರು. 4 ದೇವರ ಮುಖವನ್ನು ಅವರು ಕಾಣುವರು. ಅವರ ಹಣೆಗಳ ಮೇಲೆ ದೇವರ ಹೆಸರು ಇರುವುದು. 5 ಇನ್ನು ರಾತ್ರಿ ಇರುವುದಿಲ್ಲ. ದೀಪದ ಬೆಳಕೂ ಸೂರ್ಯನ ಬೆಳಕೂ ಅವಶ್ಯವಿಲ್ಲ. ಕರ್ತದೇವರೇ ಅವರಿಗೆ ಬೆಳಕನ್ನು ಕೊಡುವರು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು.

Em outras traduções

  1. SII25 Bíblia Siddi

    1 ದೆವಾಚ್ಯಾ ದುತಾನ್ ಮಾಕಾ ಜಿವ್ ದಿತಲ್ಯಾ ಪಾನಿಯಾಚಿ ನ್ಹಯ್‍ಬಿ ದಾಕ್ವುಲ್ಯಾನ್. ತೆ ಪಾನಿ ವಜ್ರಾಚ್ಯಾ ಸರ್ಕೆ ಪವಿತ್ರ್ ಹೊತ್ತೆ. ತೆ ದೆವಾಚ್ಯಾ ಅನಿ ಬೊಕ್ಡಾಚ್ಯಾ ಸಿವಾಸನಾಕ್ನಾ ಹೊಂವ್ನ್ ಯೆವ್‍ಲಾಗಲ್ಲೆ. 2 ಶಾರಾಚ್ಯಾ ವೊನಿಯಾಂಚ್ಯಾ ಮದ್ದಿ ಹೊಂವ್‍ಲಾಗಲ್ಲೆ, ನ್ಹಯ್‍ಚ್ಯಾ ದೊನ್ ದಂಡೆಕ್ನಿ ಜಿವ್ ದಿತಲೆ ಝಾಡ್ ಹೊತ್ತೆ, ತೆ ವರ್ಸಾಚೆ ಬಾರಾ ಮ್ಹಯಿನೆಬಿ ಫಳಾ ದಿ, ತೆ ಮಹಿನ್ಯಾಕ್ ಎಕ್ ಪಿಕ್ಕ್ ದಿ, ಅನಿ ತ್ಯಾ ಝಾಡಾಚಿ ಪಾನಾ ದೆಶಾಕ್ನಿ ಗುನ್ ಕರುಕ್ ವಾಪ್ರುನ್ ಹೊಯ್ತ್. 3 ತ್ಯಾ ಶಾರಾತ್ ದೆವಾಚ್ಯಾ ಸರಾಪಾಚ್ಯಾ ಖಾಲ್ತಿ ಹೊತ್ತೆ ಕಾಯ್ಬಿ ನತ್ತೆ.

    ದೆವಾಚೆ ಅನಿ ಬೊಕ್ಡಾಚೆ ಸಿವಾಸನ್ ಶಾರಾತ್ ರ್‍ಹಾತಾ ಅನಿ ತೆಚಿ ಸೆವಕಾ ತೆಚೆ ಆರಾದನ್ ಕರ್‍ತ್ಯಾತ್. 4 ತೆನಿ ತೆಚೆ ತೊಂಡ್ ಬಗ್ತ್ಯಾತ್, ಅನಿ ತೆಂಚ್ಯಾ ಕಪಾಳಾ ವೈನಿ ತೆಚೆ ನಾಂವ್ ಲಿವ್ನ್ ಹೊತಾ. 5 ಥೈ ಅನಿಫಿಡೆ ರಾತ್ ಮನ್ತಲಿ ರ್‍ಹಾಯ್ನಾ, ತೆಂಕಾ ದಿವ್ಯಾಂಚೊ ನಾಹೊಲ್ಯಾರ್ ದಿಸಾಚೊ ಉಜ್ವೊಡ್ ಪಾಜೆ ಮನುನ್ ನಾ, ಕಶ್ಯಾಕ್ ಮಟ್ಲ್ಯಾರ್ ಸರ್ವೆಸ್ವರ್ ದೆವುಚ್ ತೆಂಚೊ ಉಜ್ವೊಡ್ ಹೊವ್ನ್ ರ್‍ಹಾತಾ, ಅನಿ ತೆನಿ ಸದಾ ಸರ್ವತಾಕ್ ರಾಜಾಂಚ್ಯಾ ಸರ್ಕೆ ರಾಜ್ ಚಾಲ್ವುತ್ಯಾತ್.

  2. IRVKAN Indian Revised Version (IRV) - Kannada - 2019

    1 ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ 22:1 ಯೆಹೆ. 47:1-12; ಜೆಕ. 14:8:ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು, 2 ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು. 22:2 ಯೆಹೆ. 47:12:ಆ ನದಿಯ ಎರಡು ದಡಗಳಲ್ಲಿ 22:2 ಆದಿ 2:9; ಪ್ರಕ 22:14, 19; 2:7:ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ 22:2 ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ. 22:2 ಪ್ರಕ 21:24:ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು. 3 22:3 ಯೆಹೆ. 14:11; ಆದಿ 3:17:ಇನ್ನೂ ಯಾವ ಶಾಪವು ಇರುವುದಿಲ್ಲ. 22:3 ಯೆಹೆ. 48:35; ಪ್ರಕ 21:3, 23:ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನವಿರುವುದು. 22:3 ಪ್ರಕ 7:15:ಆತನ ಸೇವಕರು ಆತನಿಗೆ ಸೇವೆ ಮಾಡುವರು. 4 22:4 ಮತ್ತಾ 5:8; 1 ಕೊರಿ 13:12; 1 ಯೋಹಾ 3:2:ಅವರು ಆತನ ಮುಖವನ್ನು ನೋಡುವರು. 22:4 ಪ್ರಕ 3:12; 7:3; 14:1:ಅವರ ಹಣೆಯ ಮೇಲೆ ಆತನ ಹೆಸರು ಇರುವುದು. 5 ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ 22:5 ಕೀರ್ತ 36:9; ಪ್ರಕ 21:11, 23-25:ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು. 22:5 ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ 20:4:ಅವರು ಯುಗಯುಗಾಂತರಗಳಲ್ಲಿಯೂ ಆಳುವರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.