12 ಮುಂಜಾನೆಯ ನಕ್ಷತ್ರವೇ, ಉದಯ ಪುತ್ರನೇ,
ಆಕಾಶದಿಂದ ನೀನು ಹೇಗೆ ಬಿದ್ದೆ?
ಜನಾಂಗಗಳನ್ನು ಬಲಹೀನ ಮಾಡಿದ ನೀನು
ಭೂಮಿಗೆ ಹೇಗೆ ಬಿದ್ದೆ?
13 ನೀನು ನಿನ್ನ ಹೃದಯದಲ್ಲಿ ಹೀಗೆ ಎಂದುಕೊಂಡಿಯಲ್ಲಾ,
"ನಾನು ಆಕಾಶಕ್ಕೆ ಏರಿ,
ದೇವರ ನಕ್ಷತ್ರಗಳ ಮೇಲೆ
ನನ್ನ ಸಿಂಹಾಸನವನ್ನು ಘನತೆಗೇರಿಸುವೆನು.
ಉತ್ತರ ದಿಕ್ಕಿನ ಕಡೆಗಿರುವ ಜಫೋನ್ ಪರ್ವತದ ಮೇಲೆಯೂ
ನಾನು ಆಸೀನನಾಗುವೆನು.
14 ಉನ್ನತವಾದ ಮೇಘ ಮಂಡಲದ ಮೇಲೆ ಏರಿ,
ಮಹೋನ್ನತರಿಗೆ ಸಮಾನನಾಗುವೆನು."
15 ಆದರೆ ಪಾತಾಳದ ಕುಣಿಯ ಕಡೆಗೂ,
ಸಮಾಧಿಗೂ ಇಳಿಯುವೆ.