Pular para o conteúdo
Publicidade

ಯೆಶಾಯನು 14:12-15

IRVKAN Indian Revised Version (IRV) - Kannada - 2019

12 ಆಹಾ, ಉದಯನಕ್ಷತ್ರವೇ, ಉದಯಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ!

ಜನಾಂಗಗಳನ್ನು ಸ್ವಾಧೀನಪಡಿಸಿಕೊಂಡ ನೀನು ಭೂಮಿಗೆ ಹೇಗೆ ತಳಲ್ಪಟ್ಟಿದ್ದೀ!

13 ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಆಕಾಶಕ್ಕೆ ಏರಿ,

ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಘನತೆಗೇರಿಸಿ,

ಉತ್ತರದಿಕ್ಕಿನ ಕಟ್ಟಕಡೆಯಿರುವ ಸಮೂಹ ಪರ್ವತದ ಮೇಲೆ ಆಸೀನನಾಗುವೆನು.

14 ಉನ್ನತವಾದ ಮೇಘಮಂಡಲದ ಮೇಲೆ ಏರಿ

ಮಹೋನ್ನತನಿಗೆ ಸಮಾನನಾಗುವೆನು’ ಎಂದುಕೊಂಡೆಯಲ್ಲಾ!

15 ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧ ಸ್ಥಳಗಳಿಗೆ ತಳ್ಳಲ್ಪಡುವೆ.

Em outras traduções

  1. OKCV Kannada Contemporary Version

    12 ಮುಂಜಾನೆಯ ನಕ್ಷತ್ರವೇ, ಉದಯ ಪುತ್ರನೇ,

    ಆಕಾಶದಿಂದ ನೀನು ಹೇಗೆ ಬಿದ್ದೆ?

    ಜನಾಂಗಗಳನ್ನು ಬಲಹೀನ ಮಾಡಿದ ನೀನು

    ಭೂಮಿಗೆ ಹೇಗೆ ಬಿದ್ದೆ?

    13 ನೀನು ನಿನ್ನ ಹೃದಯದಲ್ಲಿ ಹೀಗೆ ಎಂದುಕೊಂಡಿಯಲ್ಲಾ,

    "ನಾನು ಆಕಾಶಕ್ಕೆ ಏರಿ,

    ದೇವರ ನಕ್ಷತ್ರಗಳ ಮೇಲೆ

    ನನ್ನ ಸಿಂಹಾಸನವನ್ನು ಘನತೆಗೇರಿಸುವೆನು.

    ಉತ್ತರ ದಿಕ್ಕಿನ ಕಡೆಗಿರುವ ಜಫೋನ್ ಪರ್ವತದ ಮೇಲೆಯೂ

    ನಾನು ಆಸೀನನಾಗುವೆನು.

    14 ಉನ್ನತವಾದ ಮೇಘ ಮಂಡಲದ ಮೇಲೆ ಏರಿ,

    ಮಹೋನ್ನತರಿಗೆ ಸಮಾನನಾಗುವೆನು."

    15 ಆದರೆ ಪಾತಾಳದ ಕುಣಿಯ ಕಡೆಗೂ,

    ಸಮಾಧಿಗೂ ಇಳಿಯುವೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.