ಯೇಸುನೆ ದರ್ಯಾವ್ನ ಖ್ಹೊಪ್ ಕರ್ಯೊತೆ
22 ಏಕ್ ದನ್ನೆ ಯೇಸು ಇನ ಶಿಷ್ಯರ್ನ ಜೋ಼ಡೆ, ಏಕ್ ಡೋಣ್ಮ ಚ಼ಢೀನ್ ಬೇಶಿಗಯೊ, ಅಜು಼ ಇವ್ಣುನ, "ಚಾ಼ಲೊ, ಅಪ್ಣೆ ದರ್ಯಾವ್ನಿ ಪಾರ್ಲಿ ಬಾಜೂ಼ನ ಜೈ಼ಯೆ" ಕರಿ ಬೋಲ್ಯೊ. ತದೆ ಇವ್ಣೆ ಡೋಣ್ಣಾ ಪಾಣಿಮ ಧಕೇಲಿನ್ ನಿಕ್ಳ್ಯು. 23 ಇವ್ಣೆ ಜ಼ವ್ಕರ್ತುಥೂತೆ ತದೆ ಯೇಸುನ ನಿಂದರ್ ಆಯಿನ್ ಖ್ಹುಯಿಗಯೊ. ಏಕ್ದಮ್ ಮೋಟೊ ವಹಿರೊ ವಾಗಿನ್, ಡೋಣ್ಮ ಪಾಣಿ ಭರಾವಲಗ್ಯೂಥು. ಅನೇಥಿ ಇವ್ಣೆ ಘಣಿ ಮುಶ್ಕಿಲ್ಮ ಪಡಿಗಯ. 24 ತದೆ ಶಿಷ್ಯರ್ ಖ್ಹಾರು ಯೇಸುಕನ ಐನ್, "ಗುರು, ಗುರು, ಹಮೆ ಮರ್ವಾನ ಆಯಾನಿ!" ಕರಿ ಬೋಲ್ಯ.
ತದೆ ಯೇಸುನೆ ಉಠೀನ್ ವಹಿರನಾಬಿ, ಪಾಣಿನು ಝೋ಼ಕಾಳ್ಯನಾಬಿ ಗುರ್ಕಾಯೊ. ಗುರ್ಕಾವಖ್ಹತರ್ ಯೋ ಭೀರಿಗಯು ಅಜು಼ ಖ್ಹೊಪೊ ಹುಯಿಗಯು. 25 ಬಾದ್ಮ ಯೇಸುನೆ ಇನ ಶಿಷ್ಯರ್ನ, "ತುಮಾರಿ ವಿಶ್ವಾಸ್ ಕಿಜ಼್ಜಾ ಗೈ?" ಕರಿ ಪುಛಾ಼ಯೊ.
ಕತೋಬಿ ಇವ್ಣೆ ಆಶ್ಚರ್ಯಖಾದು ಅಜು಼ ಡರಿಗಯು, ಅಜು಼ ಬೋಲ್ಯೂಕಿ, "ಆ ಅದ್ಮಿ ಕೋಣ್ ಉಶೆ? ವಹಿರನಾಬಿ, ಝೋ಼ಕಾಳ್ಯನಾಬಿ ಹುಕುಮ್ ದೇಸ್ನಿ; ಯೋಅಖ್ಖುಬಿ ಆ ಬೋಲಾತೆ ಇಮ್ ಖ್ಹಮ್ಜಾ಼ಸ್ನಿ!" ಕರಿ ಏಕ್ಥಿ-ಏಕ್ ಬೋಲಿಲಿದು
ಯೇಸುನೆ ಭೂತ್ಖ್ಹಾರು ಧರಿರಾಖ್ಯುಥೂತೆ ಏಕ್ ಅದ್ಮಿನ ಅಛ್ಛು಼ ಕರ್ಯೊತೆ
26 ಯೇಸು ಅಜು಼ ಇನು ಶಿಷ್ಯರ್ ಗಲಿಲಾಯಥು ಗೆರಸೇನವಾಳನು ತಬರ್ಖಾನ ಆಯಿನ್ ಪೋಚ್ಯಾ.