Pular para o conteúdo
Publicidade

ಜ್ಞಾನೋಕ್ತಿಗಳು 4:23-27

OKCV Kannada Contemporary Version

23 ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ;

ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ.

24 ವಕ್ರಮಾತುಗಳನ್ನು ನಿನ್ನ ಬಾಯಿಂದ ತೊಲಗಿಸಿ;

ಕೆಟ್ಟ ಮಾತುಗಳು ನಿನ್ನ ತುಟಿಗಳಿಂದ ದೂರವಿರಲಿ.

25 ನಿನ್ನ ದೃಷ್ಟಿ ನೇರವಾಗಿಯೇ ನೋಡಲಿ;

ನಿನ್ನ ನೋಟವು ನೇರವಾಗಿ ನಿನ್ನ ಮುಂದೆಯೇ ನಾಟಿರಲಿ.

26 ನೀನು ನಡೆಯುವ ದಾರಿಯ ಬಗ್ಗೆ ಗಮನವಿರಲಿ;

ನೀನು ಕೈಗೊಳ್ಳುವ ಹಾದಿ ಸ್ಥಿರವಾಗಿರಲಿ.

27 ನಿನ್ನ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಬೇಡ;

ಕೇಡಿನಿಂದ ನಿನ್ನ ಕಾಲುಗಳು ದೂರವಿರಲಿ.

Em outras traduções

  1. IRVKAN Indian Revised Version (IRV) - Kannada - 2019

    23 ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ,

    ಅದರೊಳಗಿಂದ ಜೀವಬುಗ್ಗೆಗಳು ಹೊರಡುವವು.

    24 ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು,

    ಕೆಟ್ಟ ನುಡಿಗಳನ್ನು ಬಾಯಿಂದ ದೂರಮಾಡು.

    25 ನೆಟ್ಟಗೆ ದೃಷ್ಟಿಸು,

    ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.

    26 ನೀನು ನಡೆಯುವ ದಾರಿಯನ್ನು ಸಮಮಾಡು,

    ಆಗ ನಿನ್ನ ಮಾರ್ಗಗಳೆಲ್ಲಾ ದೃಢವಾಗಿರುವವು.

    27 ಎಡಕ್ಕಾಗಲಿ ಅಥವಾ ಬಲಕ್ಕಾಗಲಿ ತಿರುಗಬೇಡ,

    ನಿನ್ನ ಕಾಲನ್ನು ಕೇಡಿಗೆ ದೂರಮಾಡು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.