Pular para o conteúdo
Publicidade

ಜ್ಞಾನೋಕ್ತಿಗಳು 4:5-8

OKCV Kannada Contemporary Version

5 ಜ್ಞಾನವನ್ನು ಪಡೆ, ತಿಳುವಳಿಕೆಯನ್ನು ಸಂಪಾದಿಸು;

ನನ್ನ ಮಾತುಗಳನ್ನು ಮರೆಯದಿರು, ಅವುಗಳಿಂದ ದೂರವಾಗಬೇಡ.

6 ಜ್ಞಾನವನ್ನು ಬಿಟ್ಟುಬಿಡಬೇಡ, ಆಕೆ4:6 ಆಕೆ ಅಂದರೆ ಜ್ಞಾನ ನಿನ್ನನ್ನು ಕಾಪಾಡುವಳು;

ಆಕೆಯನ್ನು ಪ್ರೀತಿಸು, ಆಕೆ ನಿನ್ನನ್ನು ಕಾಯುವಳು.

7 ಜ್ಞಾನವೇ ಮುಖ್ಯವಾದದ್ದು, ಆದ್ದರಿಂದ ಜ್ಞಾನವನ್ನು ಸಂಪಾದಿಸು;

ನಿನ್ನಲ್ಲಿರುವ ಎಲ್ಲಾ ಸಂಪತ್ತನ್ನು ವ್ಯಯಮಾಡಿದರೂ ತಿಳುವಳಿಕೆಯನ್ನು ಪಡೆದುಕೋ.

8 ಜ್ಞಾನವನ್ನು ನೀನು ಅಮೂಲ್ಯವೆಂದು ಎಣಿಸು, ಆಕೆಯು ನಿನ್ನನ್ನು ಮೇಲೆತ್ತುವಳು;

ಆಕೆಯನ್ನು ನೀನು ಅಪ್ಪಿಕೊ, ಆಕೆಯು ನಿನ್ನನ್ನು ಘನಪಡಿಸುವಳು.

Em outras traduções

  1. IRVKAN Indian Revised Version (IRV) - Kannada - 2019

    5 ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ,

    ನನ್ನ ಮಾತುಗಳಿಗೆ ಅಸಡ್ಡೆ ತೋರಿಸಬೇಡ.

    6 ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವುದು,

    ಪ್ರೀತಿಸಿದರೆ, ಅದು ನಿನ್ನನ್ನು ಕಾಯುವುದು.

    7 ಜ್ಞಾನವನ್ನು ಪಡೆಯಬೇಕೆಂಬುದೇ ಜ್ಞಾನಬೋಧೆಯ ಪ್ರಥಮಪಾಠ,

    ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ.

    8 ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು,

    ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.