Pular para o conteúdo
Publicidade

ಯೋಬ 2:11-13

OKCV Kannada Contemporary Version

11 ಯೋಬನ ಮೂವರು ಸ್ನೇಹಿತರು, ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಅವನಿಗೆ ಬಂದ ಈ ಎಲ್ಲಾ ಕಷ್ಟನಷ್ಟವನ್ನು ಕುರಿತು ಕೇಳಿ, ಯೋಬನಿಗೆ ಸಂತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸುವುದಕ್ಕೆ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡು, ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು. 12 ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು. 13 ಅನಂತರ ಯೋಬನು ಅನುಭವಿಸುತ್ತಿದ್ದ ಬಾಧೆಯು ಎಷ್ಟು ಕ್ರೂರವೆಂದು ಅವರು ನೋಡಿ, ಅವನ ಸಂಗಡ ಏಳು ಹಗಲು, ಏಳು ರಾತ್ರಿ ನೆಲದ ಮೇಲೆ ಕುಳಿತುಕೊಂಡಿದ್ದರು. ಒಬ್ಬನಾದರೂ ಒಂದು ಮಾತನ್ನೂ ಯೋಬನಿಗೆ ಹೇಳಲಿಲ್ಲ.

Em outras traduções

  1. IRVKAN Indian Revised Version (IRV) - Kannada - 2019

    11 ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ, "ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ, ಅವನನ್ನು ಸಂತೈಸೋಣ ಬನ್ನಿರಿ" ಎಂದು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು. 12 ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿದುಕೊಂಡರು. 13 ಬಳಿಕ ಅವನಿಗೆ ವಿಪರೀತ ಬಾಧೆ ಎಂದು ತಿಳಿದು ಏಳು ದಿನಗಳವರೆಗೆ ಹಗಲಿರುಳೂ ನೆಲದ ಮೇಲೆ ಅವನೊಂದಿಗೆ ಕುಳಿತುಕೊಂಡರು. ಅವನ ಸಂಗಡ ಒಬ್ಬರೂ ಮಾತನಾಡದೇ ಇದ್ದರು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.