ಜಗಾಚೊ ಅಂತ್
1 ತ್ಯಾ ಎಳಾರ್ ತುಮ್ಚ್ಯಾ ಲೊಕಾಂಚ್ಯಾ ರಾಕ್ವನಿ ಸಾಟ್ನಿ ಮೊಟೊ ರಾಕ್ವಲಿ ಮಿಂಗೆಲ್ ಯೆತಾ, ಪಯ್ಲೆ ಲೊಕಾ ಉಪ್ಜುಚ್ಯಾ ಅದ್ದಿಚ್ಯಾನ್ ಹೊವ್ಕ್ ನಸಲ್ಲೊ ತರಾಸ್ ಅತ್ತಾ ಹೊತಾ, ತನ್ನಾ ತುಜ್ಯಾ ಲೊಕಾಂಚ್ಯಾಕ್ಡೆ ಮಟ್ಲ್ಯಾರ್, ಸುಳ್ಳಿತ್ ಕೊನಾಚೆ ನಾವ್ ಲಿವಲ್ಲೆ ಹಾಯ್ ತೆನಿ ರಾಕ್ವನ್ ಹೊತಾತ್. 2 ಅನಿ ಜಿಮ್ನಿಚ್ಯಾ ಮಾಟಿತ್ ನಿಜಲ್ಲೆ ಹೊತ್ತೆ ಮಟ್ಲ್ಯಾರ್, ಮರುನ್ ಮಾಟಿ ಹೊಲ್ಲ್ಯಾತ್ಲಿ ಉಲ್ಲಿ ಲೊಕಾ ಕನ್ನಾಬಿ ನಾಶ್ ಹೊಯ್ ನಸಲ್ಲ್ಯಾ ಜಿವನಾಕ್ ಅನಿ, ಅನಿ ಉಲ್ಲಿ ಲೊಕಾ ಲಜ್ಜೆಕ್ ಅನಿ ಅಂತ್ ನಸಲ್ಲ್ಯಾ ತಿರಸ್ಕಾರಾತ್ ಪಡ್ತಾತ್. 3 ಉಲ್ಲಿ ಲೊಕಾ ಬುದ್ವಂತ್ ಲೊಕಾ ಮಳ್ಬಾಚೊ ಉಜ್ವೊಡ್ ಗತಿನ್, ಲೈ ಲೊಕಾಕ್ನಿ ನಿತಿವಂತ್ ಕರಲ್ಲಿ ಲೊಕಾ ಸದಾ ಸರ್ವತಾಕ್ ಚುಕ್ಕಿಯಾಂಚ್ಯಾ ಸಾರ್ಕೆ ಹೊಳಾವ್ತಾತ್.