Pular para o conteúdo
Publicidade

ಜೊಶುವಾ 14:10-12

SII25 Bíblia Siddi

10 ಸರ್ವೆಸ್ಪರಾನ್ ಹಿ ಗೊಸ್ಟಿಯಾ ಮೊಯ್ಜೆಕ್ ಸಾಂಗಟಲ್ಲ್ಯಾಕ್ನಾ ಇಜ್ರಾಯೆಲ್ ಲೊಕಾ ಡಂಗ್ಳಿತ್ ಫಿರಿತ್ ಹೊತ್ತಿ ದಿಸಾ ಮಿಳ್ವುನ್ ಚಾಳಿಸಾರ್ ಪಾಂಚ್ ವರ್ಸಾ ದಾಟ್ಲಿ, ಸರ್ವೆಸ್ಪರಾನ್ ಅಪ್ನಿ ಸಾಂಗಟಲ್ಲ್ಯಾ ಸಾರ್ಕೆಚ್ ಹ್ಯಾ ಸಗ್ಳ್ಯಾ ಎಳಾರ್ ಮಾಕಾ ಝಿತ್ತೊ ಥವ್ಲಾ, ಅತ್ತಾ ಮಾಕಾ ಆಯ್ಸಿರ್ ಪಾಂಚ್ ವರಿಸ್ ಹೊಲಾ. 11 ಮೊಯ್ಜೆನ್ ಮಾಕಾ ಧಾಡಲ್ಲ್ಯಾ ತನ್ನಾ ಹೊತ್ತಿ ತವ್ಡಿಚ್ ಬಳ್ ಅತ್ತಾಬಿ ಹಾಯ್, ಲಡಾಯ್ ಕರುಕ್ ಅನಿ ಫಿರುನ್ ಖೆಳುಕ್ ಅದ್ದಿ ಹೊತ್ತ್ಯಾ ಸಾರ್ಕಿಚ್ ಬಳ್ ಹಾಯ್, ತಸೆ ರ್‍ಹಾತಾನಾ ಸರ್ವೆಸ್ಪರಾನ್ ತ್ಯಾ ದಿಸಿ ಮಾಕಾ ದಾಕ್ವಲ್ಲೊ ಹ್ಯೊ ಮಡ್ಡಿಚೊ ಜಾಗೊ ಮಾಕಾ ದಿ. 12 ಹಿತ್ತೆ ಮೊಟಿ ಮೊಟಿ ಲೊಕಾ ರ್‍ಹಾತ್ಯಾತ್ ಅನಿ ಹೆಜಿ ಶಾರಾ ಮೊಟಿ ಅನಿ ಕೊಟೆನಿ ಭರಲ್ಲಿ ಹಾತ್ ಮನುನ್ ತ್ಯಾ ಎಳಾರ್ ತಿಯಾ ಆಯ್ಕ್ ಲೈ ನ್ಹಯ್, ತೆಂಕಾ ಸಗ್ಳ್ಯಾಕ್ನಿ ಅಪ್ನಾಚ್ಯಾ ಗೊಸ್ಟಿಸಾರ್ಕೆ ಪಳ್ಸುಕ್ ಸರ್ವೆಸ್ಪರ್ ಮಾಕಾ ಮಜತ್ ಕರ್ತಾ ಮನ್ತಲಿ ಆಶ್ಯಾ ಕರುನ್ ಘೆವ್ನ್ ಹಾಂವ್ ಮಟ್ಲ್ಯಾನ್.

Em outras traduções

  1. IRVKAN Indian Revised Version (IRV) - Kannada - 2019

    10 ಯೆಹೋವನು ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆಯುತ್ತಿದ್ದ ವರ್ಷಗಳು ಸೇರಿ ನಲ್ವತ್ತೈದು ವರ್ಷಗಳು ದಾಟಿದವು. ಯೆಹೋವನು ತಾನು ನುಡಿದಂತೆಯೇ ಈ ಕಾಲವೆಲ್ಲಾ ನನ್ನನ್ನು ಜೀವದಿಂದುಳಿಸಿದ್ದಾನೆ. ಈಗ ನಾನು ಎಂಭತ್ತೈದು ವರ್ಷದವನಾಗಿದ್ದೇನೆ. 11 ಮೋಶೆಯು ನನ್ನನ್ನು ಕಳುಹಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟೇ ಬಲವಿದೆ. ಯುದ್ಧಮಾಡುವುದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವುದಕ್ಕೂ ನನಗೆ ಮೊದಲಿನಂತೆಯೇ ಈಗಲೂ ಬಲವಿದೆ. 12 ಹೀಗಿರಲು ಯೆಹೋವನು ಆ ದಿನದಂದು ಸೂಚಿಸಿದಂತೆ ಈ ಪರ್ವತ ಪ್ರದೇಶವನ್ನು ನನಗೆ ಕೊಡು ಇದರಲ್ಲಿ ಉನ್ನತ ಪುರುಷರು (ಅನಾಕ್ಯರು) ಇರುತ್ತಾರೆ ಎಂದು ಈ ಪಟ್ಟಣಗಳು ದೊಡ್ಡದೂ, ಕೋಟೆಕೊತ್ತಲುಳ್ಳವುಗಳೂ ಆಗಿವೆ ಎಂದೂ ಆ ಕಾಲದಲ್ಲಿ ನೀನೇ ಕೇಳಿದ್ದೀಯಲ್ಲಾ. ಅವರೆಲ್ಲರನ್ನು ಓಡಿಸಿಬಿಡುವುದಕ್ಕೋಸ್ಕರ ಯೆಹೋವನು ತನ್ನ ಮಾತಿಗನುಸಾರವಾಗಿ ನನಗೆ ಸಹಾಯ ಮಾಡುವನೆಂದು ನಂಬಿಕೊಂಡಿದ್ದೇನೆ" ಅಂದನು.

  2. OKCV Kannada Contemporary Version

    10 "ಈಗ ಯೆಹೋವ ದೇವರು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲರು ಮರುಭೂಮಿಯಲ್ಲಿ ಸಂಚರಿಸಿದ ನಾಲ್ವತ್ತೈದು ವರ್ಷ ಯೆಹೋವ ದೇವರು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾರೆ. ಈಗ ನಾನು ಇಂದು ಎಂಬತ್ತೈದು ವರ್ಷ ಪ್ರಾಯದವನಾಗಿದ್ದೇನೆ. 11 ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲಿಷ್ಠನಾಗಿ ಇದ್ದೆನೋ, ಹಾಗೆಯೇ ಈಗಲೂ ಬಲಿಷ್ಠನಾಗಿದ್ದೇನೆ. ನಾನು ಯುದ್ಧ ಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳವನಾಗಿದ್ದೇನೆ. 12 ಆದ್ದರಿಂದ ಯೆಹೋವ ದೇವರು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಏಕೆಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ, ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿವಸದಲ್ಲಿ ಕೇಳಿದ್ದಿ. ಯೆಹೋವ ದೇವರು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಯೆಹೋವ ದೇವರು ನನಗೆ ಸಹಾಯ ಮಾಡುವರೆಂದು ನಂಬಿಕೊಂಡಿದ್ದೇನೆ," ಎಂದನು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.