Pular para o conteúdo
Publicidade

ಕೀರ್ತನೆಗಳು 103:19-22

OKCV Kannada Contemporary Version

19 ಯೆಹೋವ ದೇವರು ಪರಲೋಕದಲ್ಲಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ,

ಅವರ ಸಾಮ್ರಾಜ್ಯದ ಆಳಿಕೆಯು ಎಲ್ಲರ ಮೇಲೆ ಇರುವುದು.

20 ದೇವರ ದೂತರೇ, ಅವರ ಮಾತನ್ನು ಕೇಳಿ,

ಅವರಿಗೆ ವಿಧೇಯರಾಗುವ ಪರಾಕ್ರಮಿಗಳೇ,

ಯೆಹೋವ ದೇವರನ್ನು ಸ್ತುತಿಸಿರಿ.

21 ದೇವರ ಇಷ್ಟವನ್ನು ನಡೆಸುವ ಸೇವಕರೇ,

ಅವರ ಎಲ್ಲಾ ಸೈನ್ಯಗಳೇ, ಯೆಹೋವ ದೇವರನ್ನು ಸ್ತುತಿಸಿರಿ.

22 ದೇವರ ಆಳಿಕೆಯ ಎಲ್ಲಾ ಕಡೆಗಳಲ್ಲಿಯೂ ಇರುವುದು.

ಅವರ ಎಲ್ಲಾ ಸೃಷ್ಟಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ.

ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು.

Em outras traduções

  1. IRVKAN Indian Revised Version (IRV) - Kannada - 2019

    19 ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ;

    ಆತನು ಸಮಸ್ತವನ್ನೂ ಆಳುತ್ತಾನೆ.

    20 ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೆ

    ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ,

    ಯೆಹೋವನನ್ನು ಕೊಂಡಾಡಿರಿ.

    21 ಆತನ ಸೈನ್ಯಗಳೇ, ಆತನ ಚಿತ್ತವನ್ನು ನೆರವೇರಿಸುವ ಸೇವಕರೇ,

    ಯೆಹೋವನನ್ನು ಕೊಂಡಾಡಿರಿ.

    22 ಆತನ ರಾಜ್ಯದ ಸರ್ವಸ್ಥಳಗಳಲ್ಲಿರುವ ಎಲ್ಲಾ ಸೃಷ್ಟಿಗಳೇ,

    ಯೆಹೋವನನ್ನು ಕೊಂಡಾಡಿರಿ.

    ನನ್ನ ಮನವೇ, ಯೆಹೋವನನ್ನು ಕೊಂಡಾಡು.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.