Publicidade

Salmos 99

1 ಯೆಹೋವ ದೇವರು ಆಳಿಕೆ ಮಾಡುತ್ತಾರೆ.

ರಾಷ್ಟ್ರಗಳು ನಡುಗಲಿ.

ಅವರು ಕೆರೂಬಿಗಳ ಮಧ್ಯದಲ್ಲಿ ಕೂತಿದ್ದಾರೆ.

ಭೂಮಿಯು ಕದಲಲಿ.

2 ಯೆಹೋವ ದೇವರು ಚೀಯೋನಿನಲ್ಲಿ ಮಹೋನ್ನತರಾಗಿದ್ದಾರೆ.

ಎಲ್ಲಾ ಜನಗಳ ಮೇಲೆ ಉನ್ನತರಾಗಿದ್ದಾರೆ.

3 ನಿಮ್ಮ ಅತಿಶಯವಾದ ಹೆಸರನ್ನು ಜನರು ಕೊಂಡಾಡಲಿ.

ದೇವರು ಪರಿಶುದ್ಧರು.

4 ನ್ಯಾಯ ಪ್ರಿಯ ರಾಜರೇ,

ನೀವು ನೀತಿಯನ್ನು ಸ್ಥಿರಪಡಿಸುತ್ತೀರಿ.

ನ್ಯಾಯವನ್ನೂ ನೀತಿಯನ್ನೂ

ಯಾಕೋಬ್ಯರಲ್ಲಿ ನೀವು ಮನದಟ್ಟಾಗಿಸಿರುವಿರಿ.

5 ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ.

ಅವರ ಪಾದಪೀಠದಲ್ಲಿ ಆರಾಧಿಸಿರಿ.

ಏಕೆಂದರೆ ಅವರು ಪರಿಶುದ್ಧರಾಗಿದ್ದಾರೆ.

6 ಯೆಹೋವ ದೇವರ ಯಾಜಕರಲ್ಲಿ ಮೋಶೆಯೂ ಆರೋನನೂ ಇದ್ದಾರೆ.

ದೇವರ ಹೆಸರೆತ್ತಿ ಕರೆದವರಲ್ಲಿ ಸಮುಯೇಲನೂ ಸಹ ಒಬ್ಬನು.

ಇವರೆಲ್ಲರೂ ಯೆಹೋವ ದೇವರನ್ನು ಕರೆದರು.

ದೇವರು ಅವರಿಗೆ ಉತ್ತರಕೊಟ್ಟರು.

7 ಮೇಘಸ್ತಂಭದಿಂದ ಅವರ ಸಂಗಡ ಮಾತನಾಡಿದರು.

ದೇವರು ಅವರಿಗೆ ಕೊಟ್ಟ ಶಾಸನಗಳನ್ನೂ ತೀರ್ಪುಗಳನ್ನೂ ಅವರು ಕೈಗೊಂಡರು.

8 ನಮ್ಮ ದೇವರಾದ ಯೆಹೋವ ದೇವರೇ,

ನೀವು ಅವರಿಗೆ ಉತ್ತರಕೊಟ್ಟಿದ್ದೀರಿ.

ನೀವು ದುಷ್ಕೃತ್ಯಗಳಿಗಾಗಿ ಇಸ್ರಾಯೇಲರನ್ನು ದಂಡಿಸಿದರೂ

ಅವರನ್ನು ಕ್ಷಮಿಸುವ ದೇವರಾಗಿದ್ದೀರಿ.

9 ನಮ್ಮ ದೇವರಾದ ಯೆಹೋವ ದೇವರನ್ನು ಮಹಿಮೆಪಡಿಸಿರಿ.

ದೇವರ ಪರಿಶುದ್ಧ ಪರ್ವತದಲ್ಲಿ ಆರಾಧಿಸಿರಿ.

ನಮ್ಮ ದೇವರಾದ ಯೆಹೋವ ದೇವರು ಪರಿಶುದ್ಧರು.

Veja também

Publicidade
Bíblia Online Bíblia Online

Bíblia Online • Versão: 2026-06-16_06-50-08-