14 ದೇವರು ಪಶುಗಳಿಗೋಸ್ಕರ ಹುಲ್ಲನ್ನೂ,
ಮನುಷ್ಯನ ವ್ಯವಸಾಯಕ್ಕೋಸ್ಕರ ಪಲ್ಯಗಳನ್ನೂ ಮೊಳೆಸುತ್ತಾರೆ.
ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾರೆ.
15 ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ;
ಎಣ್ಣೆಯು ಮಾನವನ ಮುಖವನ್ನು ಪ್ರಕಾಶಿಸುವಂತೆ ಮಾಡುತ್ತದೆ;
ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.