1 ಯೆಹೋವ ದೇವರೇ, ಎಷ್ಟರವರೆಗೆ ನನ್ನನ್ನು ಮರೆಯುವಿರಿ? ಎಂದೆಂದಿಗೂ ನನ್ನನ್ನು ಮರೆಯುವಿರೋ?
ಎಷ್ಟರವರೆಗೆ ನಿಮ್ಮ ಮುಖವನ್ನು ನನ್ನಿಂದ ಮರೆಮಾಡುವಿರಿ?
2 ಇನ್ನೆಷ್ಟರವರೆಗೆ ನನ್ನ ಆಲೋಚನೆಗಳೊಂದಿಗೆ ನಾನು ಹೋರಾಡುತ್ತಿರಬೇಕು?
ದಿನನಿತ್ಯವು ನಾನು ನನ್ನ ಹೃದಯದಲ್ಲಿ ನೊಂದಿರಬೇಕೆ?
ಇನ್ನೆಷ್ಟರವರೆಗೆ ನನ್ನ ಶತ್ರುವು ನನ್ನ ಮೇಲೆ ಜಯ ಹೊಂದಿರಬೇಕು?