1 ಯೆಹೋವ ದೇವರೇ, ನೀವು ನನ್ನನ್ನು ಪರಿಶೋಧಿಸಿದ್ದೀರಿ;
ನನ್ನನ್ನು ತಿಳಿದುಕೊಂಡಿದ್ದೀರಿ.
2 ನಾನು ಕುಳಿತಿರುವುದನ್ನೂ, ಏಳುವುದನ್ನೂ ನೀವು ತಿಳಿದುಕೊಂಡಿದ್ದೀರಿ;
ನನ್ನ ಆಲೋಚನೆಗಳನ್ನು ದೂರದಿಂದ ಗ್ರಹಿಸಿಕೊಂಡಿದ್ದೀರಿ.
3 ನಾನು ನಡೆಯುವುದನ್ನೂ, ನಾನು ಮಲಗುವುದನ್ನೂ ನೀವು ವಿವೇಚಿಸಿದ್ದೀರಿ;
ನನ್ನ ಮಾರ್ಗಗಳೆಲ್ಲಾ ನಿಮಗೆ ಸುಪರಿಚಿತವಾಗಿವೆ.
4 ನನ್ನ ನಾಲಿಗೆಯಲ್ಲಿ ಒಂದು ಮಾತು ಆರಂಭಿಸುವುದಕ್ಕಿಂತ ಮುಂಚೆಯೇ
ಯೆಹೋವ ದೇವರೇ, ಅದು ನಿಮಗೆ ಪೂರ್ಣವಾಗಿ ತಿಳಿದಿರುತ್ತದೆ.