Pular para o conteúdo
Publicidade

ಕೀರ್ತನೆಗಳು 23

ದಾವೀದನ ಕೀರ್ತನೆ.

1 ಯೆಹೋವ ದೇವರು ನನ್ನ ಕುರುಬ ಆಗಿದ್ದಾರೆ, ನನಗೆ ಕೊರತೆಯೇ ಇಲ್ಲ.

2 ಅವರು ಹಸಿರುಗಾವಲುಗಳಲ್ಲಿ ನನ್ನನ್ನು ವಿಶ್ರಮಿಸುವಂತೆ ಮಾಡುತ್ತಾರೆ;

ಪ್ರಶಾಂತ ಜಲರಾಶಿಯ ಬಳಿಗೆ ನನ್ನನ್ನು ನಡೆಸುತ್ತಾರೆ.

3 ಅವರು ನನ್ನ ಪ್ರಾಣವನ್ನು ಚೈತನ್ಯಗೊಳಿಸುತ್ತಾರೆ.

ತಮ್ಮ ಹೆಸರಿನ ನಿಮಿತ್ತ

ನನ್ನನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾರೆ.

4 ನಾನು ಕಾರ್ಗತ್ತಲಿನ23:4 ಅಥವಾ ಮರಣದ ನೆರಳಿನಲ್ಲಿ

ಕಣಿವೆಯಲ್ಲಿ ನಡೆಯುವಾಗಲೂ,

ನೀವು ನನ್ನೊಂದಿಗಿರುವುದರಿಂದ

ನಾನು ಕೇಡಿಗೆ ಹೆದರೆನು;

ನಿಮ್ಮ ದೊಣ್ಣೆಯೂ ನಿಮ್ಮ ಕೋಲೂ

ನನ್ನನ್ನು ಸಂತೈಸುತ್ತವೆ.

5 ನೀವು ನನ್ನ ವೈರಿಗಳ ಮುಂದೆಯೇ

ನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ.

ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ.

ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.

6 ನಿಶ್ಚಯವಾಗಿ ಶುಭವೂ ಪ್ರೀತಿಯೂ

ನನ್ನ ಜೀವಮಾನವೆಲ್ಲಾ ನನ್ನನ್ನು ಹಿಂಬಾಲಿಸುತ್ತವೆ;

ನಾನು ಯೆಹೋವ ದೇವರ ಮನೆಯಲ್ಲಿ

ಸದಾಕಾಲವೂ ವಾಸಿಸುವೆನು.

Estes versículos te tocaram? Ore agora!

+581 estão orando agora.

Junte-se à corrente de oração.