16 ಆದರೆ ನಾನು ನಿಮ್ಮ ಬಲವನ್ನು ಕುರಿತು ಹಾಡುವೆನು.
ಹೌದು, ಮುಂಜಾನೆ ನಿಮ್ಮ ಪ್ರೀತಿಯ ಕುರಿತು ಹಾಡುವೆನು.
ಏಕೆಂದರೆ ನೀವು ನನಗೆ ಭದ್ರಕೋಟೆಯೂ,
ನನ್ನ ಇಕ್ಕಟ್ಟಿನಲ್ಲಿ ಆಶ್ರಯವಾಗಿಯೂ ಇದ್ದೀರಿ.
17 ನನ್ನ ಬಲವಾಗಿರುವವರೇ, ನಿಮ್ಮನ್ನು ಕೊಂಡಾಡುವೆನು.
ಏಕೆಂದರೆ ದೇವರೇ, ನೀವು ನನ್ನ ಭದ್ರಕೋಟೆ ಆಗಿದ್ದೀರಿ.
ನೀವು ನಾನು ಭರವಸೆ ಇಡುವ ಕರುಣೆಯುಳ್ಳ ದೇವರೂ ಆಗಿದ್ದೀರಿ.