1 ಯೆಹೋವ ದೇವರು ಮನೆಯನ್ನು ಕಟ್ಟದೆ ಇದ್ದರೆ,
ಅದನ್ನು ಕಟ್ಟುವವರು ವ್ಯರ್ಥವಾಗಿ ಪ್ರಯಾಸಪಡುತ್ತಾರೆ;
ಯೆಹೋವ ದೇವರು ಪಟ್ಟಣವನ್ನು ಕಾಯದೆ ಇದ್ದರೆ,
ಅದನ್ನು ಕಾಯುವವರು ವ್ಯರ್ಥವಾಗಿ ಕಾಯುತ್ತಾರೆ.
2 ನೀವು ಆಹಾರಕ್ಕಾಗಿ ಶ್ರಮೆಪಟ್ಟು,
ಬೆಳಿಗ್ಗೆ ಬೇಗ ಏಳುವುದೂ,
ರಾತ್ರಿ ತಡವಾಗಿ ಮಲಗುವುದೂ ವ್ಯರ್ಥವೇ,
ದೇವರು ತಮ್ಮನ್ನು ಪ್ರೀತಿಸುವವರಿಗೆ ನಿದ್ರೆಯಿಂದಿರುವಾಗಲೂ ಅವಶ್ಯಕತೆಗಳನ್ನು ಒದಗಿಸಿಕೊಡುತ್ತಾರೆ.