Pular para o conteúdo
Publicidade

ಕೀರ್ತನೆಗಳು 127:1,2

IRVKAN Indian Revised Version (IRV) - Kannada - 2019

ಯೆಹೋವನ ಕೃಪೆಯಿಂದಲೇ ಕೃತಾರ್ಥರಾಗುವೆವು

1 ಯೆಹೋವನು ಮನೆಯನ್ನು ಕಟ್ಟದಿದ್ದರೆ,

ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ;

ಯೆಹೋವನು ಪಟ್ಟಣವನ್ನು ಕಾಯದಿದ್ದರೆ,

ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ.

2 ಬೆಳಗಾಗುವುದಕ್ಕಿಂತ ಮುಂಚೆ ಏಳುವವರೇ,

ಹೊತ್ತು ಮೀರಿ ಮಲಗುವವರೇ,

ನೀವು ಆಹಾರಕ್ಕಾಗಿ ಇಷ್ಟು ಕಷ್ಟಪಡುವುದು ವ್ಯರ್ಥ;

127:2 ಅಥವಾ ಆತನು ತನ್ನ ಪ್ರಿಯರಿಗೆ ನಿದ್ರೆಯನ್ನು ಅಥವಾ ಪ್ರತಿಫಲವನ್ನು ಕೊಡುತ್ತಾನೆ. ಆತನು ಅದನ್ನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಕೊಡುತ್ತಾನೆ.

Em outras traduções

  1. OKCV Kannada Contemporary Version

    1 ಯೆಹೋವ ದೇವರು ಮನೆಯನ್ನು ಕಟ್ಟದೆ ಇದ್ದರೆ,

    ಅದನ್ನು ಕಟ್ಟುವವರು ವ್ಯರ್ಥವಾಗಿ ಪ್ರಯಾಸಪಡುತ್ತಾರೆ;

    ಯೆಹೋವ ದೇವರು ಪಟ್ಟಣವನ್ನು ಕಾಯದೆ ಇದ್ದರೆ,

    ಅದನ್ನು ಕಾಯುವವರು ವ್ಯರ್ಥವಾಗಿ ಕಾಯುತ್ತಾರೆ.

    2 ನೀವು ಆಹಾರಕ್ಕಾಗಿ ಶ್ರಮೆಪಟ್ಟು,

    ಬೆಳಿಗ್ಗೆ ಬೇಗ ಏಳುವುದೂ,

    ರಾತ್ರಿ ತಡವಾಗಿ ಮಲಗುವುದೂ ವ್ಯರ್ಥವೇ,

    ದೇವರು ತಮ್ಮನ್ನು ಪ್ರೀತಿಸುವವರಿಗೆ ನಿದ್ರೆಯಿಂದಿರುವಾಗಲೂ ಅವಶ್ಯಕತೆಗಳನ್ನು ಒದಗಿಸಿಕೊಡುತ್ತಾರೆ.

Direitos das traduções citadas

Estes versículos te tocaram? Ore agora!

+581 estão orando agora.

Junte-se à corrente de oração.