Publicidade

Salmos 14

ದುಷ್ಟ ನಾಸ್ತಿಕರಿಂದ ತಪ್ಪಿಸಿ ಕಾಪಾಡಬೇಕೆಂಬ ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು.

1 ದುರ್ಮತಿಗಳು ತಮ್ಮ ಮನಸ್ಸಿನಲ್ಲಿ, "ದೇವರೇ ಇಲ್ಲ" ಎಂದು ಅಂದುಕೊಳ್ಳುತ್ತಾರೆ;

ಅವರು ಕೆಟ್ಟುಹೋದವರು; ಹೇಯವಾದ ಅಕ್ರಮಗಳನ್ನು ನಡೆಸುತ್ತಾರೆ.

ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.

2 ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ,

ಎಂದು ಯೆಹೋವನು ಆಕಾಶದಿಂದ ಮನುಷ್ಯರನ್ನು ನೋಡಲಾಗಿ,

3 ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.

ಪ್ರತಿಯೊಬ್ಬನೂ ದಾರಿತಪ್ಪಿದವನು, ಎಲ್ಲರೂ ಕೆಟ್ಟು ಹೋದವರೇ.

4 ದುಷ್ಟತ್ವವನ್ನು ನಡೆಸುವವರೆಲ್ಲರು ತಿಳಿಯುವುದಿಲ್ಲವೋ?

ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ;

ಯೆಹೋವನನ್ನು ಸ್ಮರಿಸುವುದಿಲ್ಲ.

5 ಅವರು ಫಕ್ಕನೆ ಭಯಭ್ರಾಂತರಾಗುವರು;

ಏಕೆಂದರೆ ದೇವರು ನೀತಿವಂತರ ಪಕ್ಷದಲ್ಲಿದ್ದಾನೆ.

6 ನೀವು ಕುಗ್ಗಿದವರ ಸಂಕಲ್ಪವನ್ನು ಭಂಗಪಡಿಸಿದರೂ

ಯೆಹೋವನು ಅವರ ಆಶ್ರಯವಲ್ಲವೇ.

7 ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬೇಗನೆ ಬರಲಿ.

ಯೆಹೋವನು ತನ್ನ ಜನರನ್ನು ದುರವಸ್ಥೆಯಿಂದ ತಪ್ಪಿಸಿದಾಗ,

ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು,

ಇಸ್ರಾಯೇಲರು ಹರ್ಷಿಸುವರು.

Veja também

Publicidade
Bíblia Online Bíblia Online

Bíblia Online • Versão: 2026-06-18_10-32-54-