Publicidade

Salmos 127

ಯೆಹೋವನ ಕೃಪೆಯಿಂದಲೇ ಕೃತಾರ್ಥರಾಗುವೆವು
ಯಾತ್ರಾಗೀತೆ; ಸೊಲೊಮೋನನದು.

1 ಯೆಹೋವನು ಮನೆಯನ್ನು ಕಟ್ಟದಿದ್ದರೆ,

ಅದನ್ನು ಕಟ್ಟುವವರು ಕಷ್ಟಪಡುವುದು ವ್ಯರ್ಥ;

ಯೆಹೋವನು ಪಟ್ಟಣವನ್ನು ಕಾಯದಿದ್ದರೆ,

ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ.

2 ಬೆಳಗಾಗುವುದಕ್ಕಿಂತ ಮುಂಚೆ ಏಳುವವರೇ,

ಹೊತ್ತು ಮೀರಿ ಮಲಗುವವರೇ,

ನೀವು ಆಹಾರಕ್ಕಾಗಿ ಇಷ್ಟು ಕಷ್ಟಪಡುವುದು ವ್ಯರ್ಥ;

ಆತನು ಅದನ್ನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಕೊಡುತ್ತಾನೆ.

3 ಪುತ್ರಸಂತಾನವು ಯೆಹೋವನಿಂದ ಬಂದ ಸ್ವತ್ತು;

ಗರ್ಭಫಲವು ಆತನ ಬಹುಮಾನವೇ.

4 ಯೌವನದಲ್ಲಿ ಹುಟ್ಟಿದ ಮಕ್ಕಳು,

ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ;

5 ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು.

ಊರ ಬಾಗಿಲಲ್ಲಿ ವೈರಿಗಳ ಸಂಗಡ ವ್ಯಾಜ್ಯವಾಡುವಾಗ

ಅಂಥವರು ಅವಮಾನ ಹೊಂದುವುದಿಲ್ಲ.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-