Publicidade

Salmos 28

ಭಕ್ತನ ಸ್ತುತಿ
ದಾವೀದನ ಕೀರ್ತನೆ.

1 ಯೆಹೋವನೇ, ನನ್ನ ಶರಣನೇ, ನಿನಗೆ ಮೊರೆಯಿಡುತ್ತೇನೆ;

ಕೇಳದೆ ಇರಬೇಡ.

ನೀನು ಕಿವಿಗೊಡದೆ ಹೋದರೆ ನಾನು ಸತ್ತವರಿಗೆ ಸಮಾನನಾಗುವೆನಲ್ಲವೇ.

2 ನೀನು ವಾಸಿಸುವ ಮಹಾಪರಿಶುದ್ಧಸ್ಥಾನದ ಕಡೆಗೆ

ನಾನು ಕೈಯೆತ್ತಿ ಮೊರೆಯಿಡುತ್ತೇನಲ್ಲಾ;

ನನ್ನ ವಿಜ್ಞಾಪನೆಯನ್ನು ಲಾಲಿಸು.

3 ನೀನು ದುಷ್ಟರೊಡನೆಯೂ, ದುರ್ಜನಗಳ ಸಂಗಡಲೂ

ನನ್ನನ್ನೂ ಎಳೆದುಕೊಂಡು ಹೋಗಬೇಡ.

ಅವರು ಹೊರಗೆ ಒಳ್ಳೆಯದಾಗಲಿ ಎಂದು ಹೇಳಿದರೂ,

ಒಳಗೆ ಕೇಡಾಗಲಿ ಎಂದು ಯೋಚಿಸುವವರು.

4 ಅವರ ದುಷ್ಕೃತ್ಯಗಳಿಗೂ, ಕೆಡುಕಗಳಿಗೂ ಸರಿಯಾದ ಪ್ರತಿಫಲವನ್ನು ಅವರಿಗೆ ಕೊಡು;

ಅವರು ಮತ್ತೊಬ್ಬರಿಗೆ ಮಾಡಿದಂತೆಯೇ ಅವರಿಗೆ ಮಾಡು.

5 ಅವರು ಯೆಹೋವನ ಕಾರ್ಯಗಳನ್ನೂ ಮತ್ತು

ಆತನ ಕೈಕೆಲಸಗಳನ್ನೂ ವಿವೇಚಿಸಿ ತಿಳಿದುಕೊಳ್ಳದೆ ಹೋದರು;

ಆದುದರಿಂದ ಆತನು ಅವರನ್ನು ಹಾಳುಮಾಡುವನೇ ಹೊರತು ವೃದ್ಧಿಪಡಿಸುವುದಿಲ್ಲ.

6 ಯೆಹೋವನು ನನ್ನ ವಿಜ್ಞಾಪನೆಗಳನ್ನು ಕೇಳಿದ್ದಾನೆ;

ಆತನಿಗೆ ಸ್ತೋತ್ರವಾಗಲಿ.

7 ಯೆಹೋವನು ನನಗೆ ಬಲವೂ, ಗುರಾಣಿಯೂ ಆಗಿದ್ದಾನೆ;

ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು.

ಆದಕಾರಣ ನನ್ನ ಹೃದಯವು ಹರ್ಷಿಸುವುದು;

ಕೀರ್ತನಾರೂಪವಾಗಿ ಆತನನ್ನು ಸ್ತುತಿಸುವೆನು.

8 ಯೆಹೋವನು ತನ್ನ ಜನರಿಗೆ ಬಲವೂ,

ತಾನು ಅಭಿಷೇಕಿಸಿದವನಿಗೆ ಆಶ್ರಯದುರ್ಗವೂ ಆಗಿದ್ದಾನೆ.

9 ಯೆಹೋವನೇ, ನಿನ್ನ ಜನರನ್ನು ರಕ್ಷಿಸು;

ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು.

ನೀನು ಅವರ ಕುರುಬನಾಗಿರು;

ಅವರನ್ನು ಯಾವಾಗಲೂ ಪರಿಪಾಲಿಸುತ್ತಾ ಆಧಾರವಾಗಿರು.

Veja também

Publicidade
Bíblia Online Bíblia Online

Bíblia Online • Versão: 2026-06-15_21-32-39-