Publicidade

Salmos 54

ವೈರಿಗಳಿಂದ ರಕ್ಷಿಸಬೇಕೆಂದು ಪ್ರಾರ್ಥಿಸುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ಜಿಫ್ಯರು ಸೌಲನ ಬಳಿಗೆ ಬಂದು ದಾವೀದನು ತಮ್ಮಲ್ಲೇ ಅಡಗಿಕೊಂಡಿದ್ದಾನೆಂದು ತಿಳಿಸಿದಾಗ ದಾವೀದನು ರಚಿಸಿದ ಪದ್ಯ.

1 ದೇವರೇ, ನಿನ್ನ ನಾಮಮಹತ್ತಿನಿಂದ ನನ್ನನ್ನು ರಕ್ಷಿಸು;

ನಿನ್ನ ಪರಾಕ್ರಮದಿಂದ ನನ್ನ ನ್ಯಾಯವನ್ನು ಸ್ಥಾಪಿಸು.

2 ದೇವರೇ, ನನ್ನ ಪ್ರಾರ್ಥನೆಯನ್ನು ಲಾಲಿಸು;

ನನ್ನ ಮಾತುಗಳಿಗೆ ಕಿವಿಗೊಡು.

3 ಗರ್ವಿಗಳು ನನ್ನ ವಿರುದ್ಧವಾಗಿ ನಿಂತಿದ್ದಾರೆ;

ಬಲಾತ್ಕಾರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ.

ಅವರು ದೇವರನ್ನು ಲಕ್ಷಿಸುವುದೇ ಇಲ್ಲ. ಸೆಲಾ

4 ಇಗೋ, ದೇವರೇ ನನಗೆ ಸಹಾಯಕನು;

ಕರ್ತನೇ ನನ್ನ ಪ್ರಾಣವನ್ನು ಕಾಪಾಡುವವನು.

5 ನನ್ನ ಕೆಡುಕಿಗೆ ಸಮಯ ನೋಡುವವರು ತಾವೇ ಕೇಡನ್ನು ಅನುಭವಿಸಲಿ.

ನೀನು ನಂಬಿಗಸ್ತನಲ್ಲವೇ; ಅವರನ್ನು ನಿರ್ಮೂಲಮಾಡು.

6 ನಾನು ಸಂತೋಷದಿಂದ ನಿನಗೆ ಯಜ್ಞವನ್ನು ಸಮರ್ಪಿಸುವೆನು;

ಉತ್ತಮೋತ್ತಮವಾಗಿರುವ ನಿನ್ನ ಹೆಸರನ್ನು ಕೊಂಡಾಡುವೆನು.

7 ಏಕೆಂದರೆ ಯೆಹೋವನೇ, ನೀನು ನನ್ನನ್ನು ಸರ್ವ ಆಪತ್ತುಗಳಿಂದ ಬಿಡಿಸಿ,

ನನ್ನ ಕಣ್ಣ ಮುಂದೆಯೇ ನನ್ನ ವೈರಿಗಳನ್ನು ಶಿಕ್ಷಿಸಿದ್ದಿ.

Veja também

Publicidade
Bíblia Online Bíblia Online

Bíblia Online • Versão: 2026-06-18_10-32-54-