Publicidade

Salmos 121

ಯೆಹೋವನ ಭಕ್ತಪಾಲನೆ
ಯಾತ್ರಾಗೀತೆ.

1 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ;

ನನ್ನ ಸಹಾಯವು ಎಲ್ಲಿಂದ ಬರುವುದು?

2 ಭೂಮಿ, ಆಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ,

ನನ್ನ ಸಹಾಯವು ಬರುತ್ತದೆ.

3 ಆತನು ನಿನ್ನ ಪಾದಗಳನ್ನು ಕದಲಗೊಡಿಸುವುದಿಲ್ಲ;

ನಿನ್ನನ್ನು ಕಾಯುವವನು ತೂಕಡಿಸದಿರಲಿ.

4 ಇಗೋ, ಇಸ್ರಾಯೇಲರನ್ನು ಕಾಯುವಾತನು,

ತೂಕಡಿಸುವುದೂ ಇಲ್ಲ, ನಿದ್ರಿಸುವುದೂ ಇಲ್ಲ.

5 ನಿನ್ನನ್ನು ಕಾಯುವವನು ಯೆಹೋವನೇ;

ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ.

6 ಹಗಲಿನಲ್ಲಿ ಸೂರ್ಯನೂ, ಇರುಳಿನಲ್ಲಿ ಚಂದ್ರನೂ,

ನಿನ್ನನ್ನು ಬಾಧಿಸುವುದಿಲ್ಲ.

7 ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು;

ನಿನ್ನ ಪ್ರಾಣವನ್ನು ಕಾಯುವನು.

8 ನೀನು ಹೋಗುವಾಗಲೂ, ಬರುವಾಗಲೂ,

ಈಗಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.

Veja também

Publicidade
Bíblia Online Bíblia Online

Bíblia Online • Versão: 2026-06-18_14-04-22-